ಅಂಚೆ ಇಲಾಖೆ ಅಧಿಕಾರಿಗಳಿಂದ ತಾತ್ಕಾಲಿಕ ಹುದ್ದೆಯಲ್ಲಿ ಗೋಲ್ಮಾಲ್

0
178
loading...

ಅಂಚೆ ಇಲಾಖೆ ಸಿಬ್ಬಂದಿಗಳ ಕುಟುಂಸ್ಥರಿಗೆ ಬಿಪಿಎಮ್ ಹುದ್ದೆಗಳು ಸಿಗುತ್ತಿವೆ
ಕನ್ನಡಮ್ಮ ವಿಶೇಷ ವರದಿ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಬಿಪಿಎಮ್ ಆಗಿ ಎ ಆಯ್. ಸೋಮಣ್ಣವರ ಮೆ. 31 ರಂದು ನಿವೃತ್ತಿಹೊಂದಿದ್ದಾರೆ. ಈ ಹುದ್ದೆಗೆ ಅಂಚೆ ಇಲಾಖೆಯ ಹಳೆಯ ನಿಯಮದ ಪ್ರಕಾರ ನಿವೃತ್ತಿಯನ್ನು ಹೊಂದುವವರಿಗೆ ಹುದ್ದೆಯಲ್ಲಿ ಮುಂದುವರೆಯಲು ಸೂಚಿಸುವುದು. ಇಲ್ಲದಿದ್ದರೆ ಸ್ಥಳಿಕರಿಗೆ ಅರ್ಜಿ ಮೂಲಕ ಹುದ್ದೆನ್ನು ತಾತ್ಕಾಲಿಕವಾಗಿ ತುಂಬಿಕೊಳ್ಳಬೇಕು.
ಆದರೆ, ಅಂಚೆ ಇಲಾಖೆ ಇದರಲ್ಲಿ ಯಾವ ನಿಯಮವನ್ನು ಪಾಲಿಸದೆ ಅಂಚೆ ಇಲಾಖೆಯ ಅಧಿಕಾರಿಗಳು ತಮಗೆ ಇಚ್ಚೆ ಬಂದಹಾಗೆ ತಾತ್ಕಾಲಿಕ ಹುದ್ದೆಯನ್ನು ಬೇರೆ ಗ್ರಾಮದ ಯುವತಿಗೆ ನೀಡಿದ್ದಾರೆ. ಇದರಿಂದ ಗ್ರಾಮದ ಜನರು ಆಕ್ರೋಶಗೊಂಡು ಅಂಚೆ ಕಚೇರಿಗೆ ಬೀಗ ಹಾಕಲು ಮುಂದಾಗಿದ್ದರೆ ಎಂದು ಗ್ರಾಮದ ಕೆಲ ಮುಖಂಡರು ತಿಳಿಸಿದ್ದಾರೆ.
ನಿವೃತ್ತಿ ಹೊಂದಿದ ಸೋಮಣ್ಣವರು ಹೇಳುವ ಪ್ರಕಾರ ಹೊಸದಾಗಿ ಆಯ್ಕೆಯಾಗಿರುವ ಯುವತಿಗೆ ನಾವೆ ತರಬೇತಿ ನೀಡಬೇಕು ಎಂದು ಅಂಚೆ ಇಲಾಖೆಯ ಮೇಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೇ ಶರಣಪ್ಪ ನಾಯಕ (ಅಂಚೇ ನಿರೀಕ್ಷಕ) ಇವರ ಸೊಸೆಯಾಗಿರುವುದರಿಂದ ಇಲಾಖಾಧಿಕಾರಿಗಳು ಒತ್ತಡಕ್ಕೆ ಮಣಿದು ಹುದ್ದೆಯನ್ನು ನೀಡಿದ್ದಾರೆ.
ಈ ಕುರಿತು ವಿಚಾರಿಸಿ ಮಾಹಿತಿ ಪಡೆದುಕೊಂಡಾಗ ಇದೇ ರೀತಿಯಲ್ಲಿ ಈ ಮೊದಲು ಸಹ ಶರಣಪ್ಪ ನಾಯಕ (ಆಯ್ ಪಿ) ಇವರ ಸಹಾಯದಿಂದಲೆ ಛಬ್ಬಿ, ಹರಿಪೂರ, ಹಾಗೂ ಯರೇಬೇಲೇರಿ ಅಂಚೇ ಕಛೇರಿಗಳ ತಾತ್ಕಾಲಿಕ ನೇಮಕಾತಿಯಲ್ಲಿ ಕೈಚಳಕವಿರುವುದು ಸ್ಪಷ್ಟವಾಗಿದೆಯಲ್ಲದೇ ಸೇವಾ ಅನುಭವದ ಮೇಲೆ ಈ ನಾಲ್ಕು ಕಡೆಗಳಲ್ಲಿನ ತಾತ್ಕಾಲಿಕ ಹುದ್ದೆಗಳು ಮುಂದೊಂದು ದಿನ ಕಾಯಂ (ರೆಗ್ಯೂಲರ್) ಸೇವೆಯಾಗಿ ಪರಿವರ್ತನೆಯಾಗಬಹುದು ಎಂದು ಹೇಳುತ್ತಿದ್ದಾರೆ.
ಈ ಕುರಿತು ಕನ್ನಡಮ್ಮ ಪ್ರತಿನಿಧಿ ಪೋನ್ ಮೂಲಕ ಗದಗ ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕರಿಗೆ ವಿಚಾರಿಸಿದಾಗ ಅವರು ಹೇಳುವ ಪ್ರಕಾರ ನಿವೃತ್ತಿ ಹೊಂದಿದ ವ್ಯಕ್ತಿಯನ್ನು ಪುನಃ ತಾತ್ಕಾಲಿಕವಾಗಿ ಹುದ್ದೆಯಲ್ಲಿ ಮುಂದುವರೆಸುವ ನಿಯಮ ಬದಲಿಗೊಂಡು ಈಗಾಗಲೇ 12 ವರ್ಷಗಳಾಯಿತು. ಈ ಹುದ್ದೆಗೆ ಎಸ್ಸೆಸ್ಸೆಲ್ಸಿ ಪರಿಕ್ಷೇಯಲ್ಲಿ ಪಾಸಾದ ಯಾರನ್ನಾದರು ತೆಗದುಕೊಳ್ಳಬಹುದು. ಹಾಗಾಗಿ ಅರ್ಜಿಯನ್ನು ಯಾರು ಸಲ್ಲಿಸಿರುತ್ತಾರೊ ಅವರಿಗೆ ನೀಡಲಾಗುತ್ತದೆ.
ಆದರೆ, ಈಗ ತೆಗೆದುಕೊಂಡಿರುವ ತಾತ್ಕಾಲಿಕ ಹುದ್ದೆಗೆ ಯಾವುದೆ ಅರ್ಜಿ ಕರೆಯದೆ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕುಟುಬಂಸ್ಥರಿಗೆ ನೀಡಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಾನೂನು ನಿಯಮದ ಪ್ರಕಾರ ಮಾತನಾಡುವ ಅಂಚೆ ಅಧಿಕಾರಿಗಳು ಈ ಹುದ್ದೆಯನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳುವುದರಲ್ಲಿ ಏಕೆ ಎಡವಿದ್ದಾರೆ ಎಂದು ಗೊತ್ತಿಲ್ಲ. ಅಧಿಕಾರಿಗಳೆ ಹೇಳುವಂತೆ ಒಂದು ತಾತ್ಕಾಲಿಕ ಹುದ್ದೆಯನ್ನು ತುಂಬಿಕೊಳ್ಳುವ ಮುಂಚಿತವಾಗಿ ಅಧಿಕೃತವಾಗಿ ನೋಟಿಸ್ ಜಾರಿ ಮಾಡಿ ಅದರಂತೆ ಯಾವುದೇ ಗ್ರಾಮದ ಅಭ್ಯರ್ಥಿಗಳಾಗಲಿ ಅಂಥವರನ್ನು ಮೆರಿಟ್ ಆಧಾರದ ಮೇಲೆ ಹುದ್ದೆಯನ್ನು ನೀಡಬೇಕು ಇದನ್ನು ಮಾಡದೇ ಅಧಿಕಾರಿಗಳು ಸುಗನಹಳ್ಳಿಗ್ರಾಮದ ಅಂಚೆ ಹುದ್ದೆಯ ಆಕಾಂಕ್ಷಿಗಳು ಆಕ್ರೋಶಕ್ಕೆ ಎಡೆಮಾಡಿದಂತಾಗಿದೆ.
ಬಾಕ್ಸ್
ನಿವೃತ್ತಿ ಹೊಂದಿದ ವ್ಯಕ್ತಿಯನ್ನು ಸರ್ಕಾರದ ಆದೇಶದ ಮೆರೆಗೆ ಅವರನ್ನು ಪುನಃ ತೆಗೆದುಕೊಳ್ಳಲು ಬರುವುದಿಲ್ಲ ಹಾಗಾಗಿ ಅರ್ಜಿಗಳನ್ನು ಕರೆದಿದ್ದು ಆದಷ್ಟೂ ಬೇಗನೆ ಕಾಲಿಯಾದ ಹುದ್ದೆಯಲ್ಲಿ ಖಾಯಂ ಹುದ್ದೆಯನ್ನು ತುಂಬಿಕೊಳ್ಳಲಾಗುವುದು. ಒಂದು ವೇಳೆ ತಡವಾದರೆ ಈ ತಾತ್ಕಾಲಿಕ ಹುದ್ದೆಗೆ ಗ್ರಾಪಂ ಮಟ್ಟದ ಹಂತದಲ್ಲಿ ಅರ್ಹ ಫಲಾನುಭವಿಗಳನ್ನು ಕರೆದು ಅದರಲ್ಲಿ ಯಾರು ಹೆಚ್ಚಿನ ಅಂಕ ಪಡೆದಿರುತ್ತಾರೊ ಅಂಥವರಿಗೆ ಹುದ್ದೆ ನಿಡಲಾಗುವುದು.
-ಎಮ್ ವಿ ಪಾಟೀಲ ಅಂಚೆ ಸಹಾಯಕ ಅಧೀಕ್ಷಕರು ಗದಗ
ಬಾಕ್ಸ್
ಅಂಚೆ ಇಲಾಖೆ ಯಾವುದೇ ನಿಯಮವನ್ನು ಪಾಲಿಸದೆ ತಮ್ಮ ಸಂಬಧಿಕರಿಗೆ ಹುದ್ದೆಯನ್ನು ನೀಡಿ ನಂತರ ಕಾಯಂಗೊಳಿಸುವ ತಂತ್ರವನ್ನು ಅಂಚೆ ಇಲಾಖೆ ಮಾಡುತ್ತಾ ಬಂದಿದೆ. ಹಾಗಾಗಿ ಸಧ್ಯದಲ್ಲಿ ಈ ಯುವತಿಯನ್ನು ವಜಾಗೊಳಿಸಿ ಪಾರದರ್ಶಕವಾಗಿ ಹುದ್ದೆಯನ್ನು ತುಂಬಿಕೊಳ್ಳದಿದ್ದರೆ ಮುಂದೆ ಅಂಚೆ ಕಚೇರಿಯ ಬಾಗಿಲು ಹಾಕುತ್ತೆವೆ.
-ಮಂಜುನಾಥ ಕಮ್ಮಾರ. ಸುಗನಹಳ್ಳಿ ಗ್ರಾಮಸ್ಥ

loading...