ಅಥಣಿಯಿಂದ ಸಿಎಂ ಸ್ಪರ್ಧೆಗೆ ಒಪ್ಪಿಗೆ: ಸಚಿವ ರಮೇಶ

0
371
loading...


ಕನ್ನಡಮ್ಮ ಸುದ್ದಿ
ಬೆಳಗಾವಿ: ಬಿಜೆಪಿ ಭದ್ರಕೋಟೆಯಾದ ಅಥಣಿಯಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಎಂಎಲ್ ಸಿ ವಿವೇಕರಾವ ಪಾಟೀಲ ನಾನು ಸಿಎಂ ಸಿದ್ದರಾಮಯ್ಯಾ ಅವರ ಜೊತೆಗೆ ಮಾತುಕತೆ ನಡೆಸಿದಾಗ ಸಿಎಂ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯ ಭದ್ರಕೋಟೆ ಮುರಿಯಲು ಸಂಕಲ್ಪ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಅಥಣಿಯಿಂದ ಸಿಎಂ ಸಿದ್ದರಾಮಯ್ಯಾ ಹಾಗೂ ರಾಯಬಾಗ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಸ್ಪರ್ಧೆ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಿದರು.
ಸಂಸದ ಪ್ರಕಾಶ ಹುಕ್ಕೇರಿ ಸಚಿವ ರಮೇಶ ಅವರ ಮಾತನ್ನು ಬೆಂಬಲಿಸಿ ಸಿಎಂ ಅಥಣಿಯಿಂದ ಹಾಗೂ ಪರಮೇಶ್ವರ ರಾಯಬಾಗದಿಂದ ಸ್ಪರ್ಧೆ ಮಾಡಿದರೆ ಜಿಲ್ಲೆಯ ೧೮ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಎನ್ನುವುದರ ಮೂಲಕ ಸಿಎಂ ಅವರಿಗೆ ಜಿಲ್ಲೆಯಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದರು.

loading...