ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಪತ್ರಿಕೆ ವಿತರಕ

0
365
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:14 ಮದುವೆಯಾಗಿ ಎರಡು ಮಕ್ಕಳಿದ್ದರೂ ಮದುವೆಯಾಗುವುದಾಗಿ ಹೇಳಿ 17 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆ ಪವಿತ್ರ ರಂಜಾನ ಮಾಸದಲ್ಲಿ ಪತ್ರಿಕೆಯ ವಿತರಕ ಹುಸೇನಸಾಬ್ ನದಾಫ್ ಎಂಬ ಕಾಮುಕ ಅಪ್ರಾಪ್ತೆ ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆನಲ್ಲಿ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ 17 ವರ್ಷದ ಅಪ್ರಾಪ್ತೆಯ ಬಾಲಕಿಯನ್ನು ರಾಮದುರ್ಗದ ಸ್ನೇಹಿತ ಮನೆಗೆ ಹೋಗುವ ನೆಪದಲ್ಲಿ ಆಕೆಯನ್ನು ಪಟಾಯಿಸಿದ್ದಾನೆ. ನಂತರ ಕಳೆದ ಮೇ 6 ರಂದು ರಾತ್ರಿ 1 ಗಂಟೆಗೆ ಬಾತ್ ರೂಂಗೆ ಹೋಗಿ ಬರುತ್ತೇನೆ ಎಂದುಹೇಳಿ ಒತ್ತಾಯ ಪೂರ್ವಕವಾಗಿ ಅಪರಿಸಿಕೊಂಡು ಹೋಗಿದ್ದಾನೆ.
ಈಕೆ ಅಪ್ರಾಪ್ತೆ ವಯಸ್ಸಿನವಳು ಎಂದು ತಿಳಿದಿದ್ದರೂ ಸಹಿತ ಉಗರಗೋಳದ ಪತ್ರಿಕೆಯ ವಿತರಕ ಅಪ್ರಾಪ್ತೆಗೆ ಮದುವೆಯಾಗಿ ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಕಳೆದ ಕಳೆದ ಸೋಮವಾರ ಬೆಂಗಳೂರಿನ ಗಾರ್ಡನಲ್ಲಿನವೊಂದರಲ್ಲಿ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ಥೆಯ ಪೋಷಕರು ದೂರಿನಲ್ಲಿ ದೂರಿದ್ದಾರೆ.
ಆರೋಪಿ ಹುಸೇನಸಾಬ್ ನದಾಫ್ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

loading...