ಅರಣ್ಯ ಇಲಾಖೆ ಗುತ್ತಿಗೆದಾರ ಇರ್ಷಾದ ಮೇಲೆ ದೂರು ದಾಖಲು

0
76
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಅರಣ್ಯ ಇಲಾಖೆಯ ಗುತ್ತಿಗೆದಾರ ಇರ್ಷಾದ ಹವಾಲ್ದಾರ ಎಂಬುವವರ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲು ಮಾಡಿದ ಪ್ರಕರಣ ಶುಕ್ರವಾರ ನಡೆದಿದೆ.
ಇಲ್ಲಿನ ಹನುಮಾನ ನಗರದಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲ ಸಂಭವಿಸಿದ ಹಿನ್ನಲೆಯಲ್ಲಿ ರಸ್ತೆಯಲ್ಲಿ ಹೋಗುವವರ ಮೇಲೆ ಟೊಂಗೆಗಳು ಬಿದ್ದು ಅಪಘಾತ ಸಂಭವಿಸಬಾರದು ಎಂದು ಅರಣ್ಯ ಇಲಾಖೆ ಗುತ್ತಿಗೆದಾರರಿಗೆ ಗುತ್ತಿಗೆ ಆದಾರದಲ್ಲಿ ಮರಗಳ ಟೊಂಗೆಗಳನ್ನು ಕಡಿಯಲು ತಿಳಿಸಿತ್ತು. ಆದರೆ, ಅರಣ್ಯ ಇಲಾಖೆ ಸೂಚಿಸಿದ ಟೊಂಗೆಗಳಿಗಿಂತ ಹೆಚ್ಚು ಕಡಿದು ಮರಗಳ ಟೊಂಗೆಗಳನ್ನು ದರೆಗೆ ಉರುಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಅರಣ್ಯ ಇಲಾಖೆಯ ಕಾಯ್ದೆಯ ಪ್ರಕರಾವಾಗಿ  ಮರದ ಟೊಂಗೆ ಕಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

loading...