ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ

0
35
loading...

ನವದೆಹಲಿ: ಆಗಸ್ಟ್ 10ಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕಾಲಾವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿ ಪಡಿಸಿದೆ.
ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ನಸೀಮ್ ಜೈದಿ  ಈ ವಿಷಯ ತಿಳಿಸಿದ್ದಾರೆ. ಜುಲೈ 4 ರಂದು ನೊಟಿಫಿಕೇಶನ್ ಜಾರಿಯಾಗಲಿದ್ದು, ಜುಲೈ 18ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಆಗಸ್ಟ್ 5 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಉಪರಾಷ್ಟ್ರಪತಿ ಚುನಾವಣೆಗೆ ರಾಜ್ಯಸಭೆ ಸೆಕರೇಟರಿ ಜನರಲ್ ಶಂಷರ್ ಶರೀಫ್ ರಿಟರ್ನಿಂಗ್ ಆಫೀಸರ್ ಆಗಿ ವ್ಯವಹರಿಸಲಿದ್ದಾರೆ.

loading...