ಆಟಿಸಂ ನಿಂದ ಗುಣಮುಖನಾದ ರೊನನ್

0
95
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:14 ಅಟಿಸಂ ಮತ್ತು ನರರೋಗ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಮುಂಬೈ ಮೂಲದ ನ್ಯೂರೊಜಿನ್ ಬ್ರೈನ್ ಆ್ಯಂಡ್ ಸ್ಪೈನ್ ಇನಸ್ಟಿಟ್ಯೂಟ್ ಸಮಗ್ರ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಚಿಕಿತ್ಸೆ ನೀಡಲಗಿದೆ ಎಂದು ಡಾ. ನಂದಿನಿ ಇಂದಿಲ್ಲಿ ಹೇಳಿದರು.
ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಆಟಿಸಂ ಸ್ಲೆಕ್ಟ್ರಂ ಡಿಸ್ ಆರ್ಡರ್ ಎಂಬುವುದು ಸಾಮಾನ್ಯವಾಗಿ ಕಂಡು ಬರುವ ಬಾಲ್ಯಾವಸ್ಥೆಯಲ್ಲಿ ಕಾಣಿಸುವ ನರ ಮಾನಸಿಕ ಸ್ಥಿತಿಯ ಏರುಪೇರಿನ ಸಮಸ್ಯೆಯಾಗಿದೆ. ಯುಎಸ್‌ಎ ನಲ್ಲಿ ಆಟಿಸಂ ಸಮಸ್ಯೆ ಪ್ರತಿ 68 ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ 250 ಮಕ್ಕಳಲ್ಲಿ ಒಬ್ಬರಿಗೆ ಆಟಿಸಂ ಬಾಧಿಸಲಿದ್ದು ಈ ಕುರಿತಾಗಿ ಹೆಚ್ಚು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಒಂದು ‌ಮಗುವಿಗೆ ಆಟಿಸಂ ಬಾಧಿಸಬಹುದು ಎಂಬುದು ಅನೇಕ ಪೋಷಕರಿಗೆ ಜೀವನವನ್ನೇ ಬದಲಿಸಬಹುದಾದ ಸಂಗತಿಯಾಗಬಹುದು. ಆಟಿಸಂ ಎಂಬುವುದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಮಾತಿನ, ಹೆಚ್ಚಿನ ಚಟುವಟಿಕೆ ಸಾಮಾಜಿಕ ಸ್ಪಂದನೆಯ ಕೊರತೆ ಹೆಚ್ಚು ಕಾಡುತ್ತದೆ. ದೇಶದಲ್ಲಿ ಒಂದುಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ನ್ಯೂರೊಜೆನ್ ಬ್ರೈನ್ ಮತ್ತು ಸ್ಪೈನ್ ಇನ್ಸ್ಟಿಟ್ಯೂಟ್ ಮತ್ತು ಸಿಯೊನ್ ಮುಂಬೈನ ಎಲ್ ಟಿಎಂಜಿ ಹಾಸ್ಪಿಟಲ್ ಮತ್ತು ಎಲ್ ಟಿಎಂ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಮತ್ತು ನರರೋಗ ವಿಭಾಗದ ಮುಖ್ಯಸ್ಥ ಡಾ. ಅಲೋಕ ಶರ್ಮಾ ವೈದ್ಯಕೀಯ ವಿಜ್ಞಾನದ ಈ ಪ್ರಗತಿ ಬಗೆ ಹರಿಸಲಾದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ ಎಂದರು.
ಐದುವರೆ ವರ್ಷದ ಬಾಲಕ ರೊನನ್ ಪಿಕ್ಸಾಟೊ ಗೆ ಡಿಸೆಂಬರ್ 2016ರಲ್ಲಿ
ಚಿಕಿತ್ಸೆ ನೀಡಲಾಗಿತ್ತು. ಪ್ರಾಥಮಿಕ‌ ಹಂತದ ಕ್ರಮವನ್ನು ಪಾಲಿಸದೆ ಇರುವುದು ಚಿಕಿತ್ಸೆಗೆ ಮುನ್ನ ತಿಳಿದು ಬಂತು. ವಯಸ್ಸಿಗೆ ಅನುಗುಣವಾಗಿ ಬಾಲಕ ಸಂಗತಿಗಳನ್ನು‌‌ ಗುರುತಿಸುತ್ತಿರಲಿಲ್ಲ. ಆತನ ಆಟದ ಮೇಲೆಯೂ ಪರಿಣಾಮ ಬೀರಿತ್ತು. ಕಾರಣವಿಲ್ಲ ನಗುವುದು ಅಧಿಕ ಕ್ರಿಯಾಶೀಲನಿದ್ದರೂ‌ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ನ್ಯೂರೊಜೆನನಲ್ಲಿ ರೊನನ ಸ್ಪೆಮ್ಬಸೆಲ್ ಥೆರಪಿ ಮೂಲಕ ಪುನರ್ವಸತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಆತನಲ್ಲಿ ಏಕಾಗ್ರತೆ ಬೆಳೆಸುವುದು. ಸಂವಹನ ಕ್ರಿಯೆಗೆ ಒತ್ತು ನೀಡಿ ವಿವಿಧ ಚಿಕಿತ್ಸಾ ಕ್ರಮಗಳನ್ನು ಆಕ್ಯುಪೇಷನಲ್ ಥೆರಪಿ ಒದಗಿಸಲಾಯಿತು ಎಂದರು.
ರೋನನ್ ತಾಯಿ ಮಾತನಾಡುತ್ತ, ತಮ್ಮ ಮಗನಿಗೆ ಆಟಿಸಂ ಇದೆ ಎಂದು ತಕ್ಷಣ ಒಪ್ಪಲಿಲ್ಲ. ಒಂದು‌ ವರ್ಷದಿಂದ ಕುಳಿತಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲ‌ ಆಸ್ಪತ್ರೆಗಳಿಗೂ ತೆರಳಿದರೂ ಚಿಕಿತ್ಸೆ ಇಲ್ಲ ಎಂದು ಹೇಳಿದ್ದರು. ಆದರೆ ಡಾ. ನಂದಿನಿ ಅವರು ಚಿಕಿತ್ಸೆ ನೀಡಿ ತಮ್ಮ ಮಗನಿಗೆ ಆಟಿಸಂ ಇರುವುದನ್ನು ದೂರಮಾಡಿದರು ಎಂದರು.

loading...