ಉಚಿತ ಮೊಬೈಲ್ ದುರಸ್ಥಿ ತರಬೇತಿಗೆ ಅರ್ಜಿ

0
60
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಂಡ್‍ಆರ್‍ಸೆಟಿ) ವತಿಯಿಂದ ಜಿಲ್ಲೆಯ ಯುವಕ ಯುವತಿಯರಿಗೆ ಜೂ. 21 ರಿಂದ ಜು. 20 ರವರಗೆ 30 ದಿನಗಳ ಅವಧಿಯ ಉಚಿತ ಮೊಬೈಲ್ ದುರಸ್ಥಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಭಾಗವಹಿಸಲಿರುವ ಅಭ್ಯರ್ಥಿಗಳು ಕನಿಷ್ಠ 8ನೇಯ ತರಗತಿಯವರೆಗೆ ವಿದ್ಯಾರ್ಹತೆ ಹೊಂದಿದ್ದು, 18 ರಿಂದ 45 ವರ್ಷದ ವಯೋಮಿತಿಯಲ್ಲಿರಬೇಕು ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಲಗತಿಸಿ ಜೂ. 19 ರೊಳಗಾಗಿ ಸಿಂಡ್ ಆರ್‍ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2440644, 9449860564 ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ವೆಬ್ ಸೈಟ್, www.syndrsetibelagavi.org ನೋಡಿರಿ. ಅರ್ಜಿಯನ್ನು ಆನ್‍ಲೈನ್ ಮೂಲಕವೂ ಸಲ್ಲಿಸಬಹುದು.

loading...