ಉಡುಗೊರೆ ಹೆಸರಿನಲ್ಲಿ ಬರುವ ಅಂಚೆ ಪಾರ್ಸಲ್ ಬಗ್ಗೆ ಗ್ರಾಹಕರು ಎಚ್ಚರ !

0
30
loading...

200 ರೂ. ಬೆಲೆಬಾಳುವ ಉಡುಗೊರೆಗೆ 3200 ರೂ. ಗ್ರಾಹಕನಿಗೆ ಪಂಗನಾಮ
| ಚಂದ್ರಶೇಖರ ಸೋಮಣ್ಣವರ
ಲಕ್ಷ್ಮೇಶ್ವರ: ಉಡುಗೊರೆ ಹೆಸರಿನಲ್ಲಿ ಬರುವ ಅಂಚೆ ಪಾರ್ಸಲ್ ತೆಗೆದುಕೊಳ್ಳುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾದುದು ಏಕೆಂದರೆ ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳಬೇಕಾದಿತು. ಗಿಪ್ಟ್ ಹೆಸರಿನಲ್ಲಿ ವಂಚಕರು ಅಂಚೇ ಇಲಾಖೆಯ ಸೇವೆಯನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ವಂಚಿಸುತ್ತಿರುವ ಜಾಲ ಈಗ ನಮ್ಮ ರಾಜ್ಯದಲ್ಲೂ ಆವರಿಸಿದ್ದು ಬಡವರೇ ಈ ಜಾಲದ ಟಾರ್ಗೇಟ್ ಅಂತಾ ಹೇಳಬಹುದು.
ಇದಕ್ಕೆ ಉದಾಹರಣೆಯಾಗಿ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ವಿರುಪಾಕ್ಷಪ್ಪ ವಾಲಿಕಾರ ಎಂಬುವರಿಗೆ ಇಂಗೆಲ್ ಹೇಮ್ ಎಂಟರಪ್ರೈಸಸ್ ನವದೇಹಲಿಯಿಂದ ಉಡುಗೊರೆಯಾಗಿ ಬೆಲೆಬಾಳುವ ಒಂದು ಮೊಬೈಲ್ ಹ್ಯಾಂಡಸೆಟ್ ಇದೆ ಎಂದು ಅಂಚೇ ಪಾರ್ಸಲ್ ಬಂದಿದೆ (ಅಂಚೇ ಸಿಒಡಿ ಪಾರ್ಸಲ್ ನಂಬರ-ವಾಯ್‍ಎ127504340 ಆಯ್‍ಎನ್) ಅಂಚೇ ಇಲಾಖೆಗೆ 3200 ರೂ ಹಣ ಪಾವತಿಸಿ ಪಾರ್ಸಲ್ ಪಡೆದ ಗ್ರಾಹಕನು ಮನೆಗೆ ಹೋಗಿ ಪಾರ್ಸಲ್ ತೆಗೆದು ನೋಡಿದಾಗ ಅದರೊಳಗೆ ಬೆಲೆಬಾಳುವ ಮೊಬೈಲ್ ಹ್ಯಾಂಡಸೆಟ್ ಬದಲಾಗಿ ಕಚ್ಚಾ ಲೋಹಗಳಿಂದ ಮಾಡಿದ ಹಾಗೂ ಮಕ್ಕಳ ಆಟಿಕೆ ಸಾಮಗ್ರಿ ಗಳಂತಿರುವ ಒಂದು ಲಕ್ಷ್ಮೀಭಾವಚಿತ್ರ ಒಂದು ಆಮೆ ಭಾವಚಿತ್ರ ಹಾಗೂ ಒಂದು ಲಕ್ಷ್ಮೀಯಂತ್ರ ಹೀಗೆ ಒಟ್ಟು ಮೂರು ಚಿಕ್ಕ ಸಾಮಗ್ರಿಗಳು ಇದ್ದವು. ಇವುಗಳ ಬೆಲೆ ಸುಮಾರು 200 ರೂ.ಗಳಾಗಬಹುದಷ್ಟೆ ಗಿಪ್ಟ್ ಪಡೆಯುವ ಸಂತಸದಲ್ಲಿ ದಿನನಿತ್ಯವೂ ಈ ರೀತಿಯಲ್ಲಿ ಅದೆಷ್ಟು ಜನರು ಮೋಸಕ್ಕೊಳಗಾಗುತ್ತಿದ್ದಾರೆ.
ಹೇಗೆ ಮೋಸ ಮಾಡುತ್ತಾರೆ: ಮೊದಲು ಅಂತರಜಾಲದ ಮೂಲಕವಾಗಿ ಬಹಳದಿನಗಳಿಂದ ಉಪಯೋಗಿಸುತ್ತಿದ್ದ ಮೊಬೈಲ್ ಸಂಖ್ಯಗಳನ್ನು ಕಲೆಹಾಕಿ ನಂತರ ಆ ಸಂಖೆಗೆ ಕರೆ ಮಾಡಿ ಸರ್ ನೀವು ಬಹಳ ವರ್ಷದಿಂದ ಒಂದೆ ಸಿಮ್ ಉಪಯೋಗಿಸುತ್ತಿದ್ದಿರಿ ಆ ಕಾರಣದಿಂದ ನಿಮಗೆ ನಮ್ಮ ಸಂಸ್ಥೆಯಿಂದ ಅತಿ ಕಡಿಮೆ ದರದಲ್ಲಿ ನಿಮಗೆ ಸ್ಯಾಮ್‍ಸಂಗ್ ಸಂಸ್ಥೆಯ ಹ್ಯಾಂಡ್‍ಸಟ್ ನೀಡುತ್ತೆನೆಂದು ಪದೇ ಪದೇ ಕರೆ ಮಾಡಿ ಹೇಳುತ್ತಾರೆ. ಇದರಿಂದ ಕೆಲ ಗ್ರಾಹಕರು ಒಪ್ಪುವುದಿಲ್ಲ ಕೆಲ ಗ್ರಾಹಕರು ಇವರು ಮಾತನಾಡು ಮಾತಿಗೆ ಮಾರು ಹೋಗಿ ಅವರು ಅಂಚೇ ಇಲಾಖೆಯ ವಿಪಿಪಿ ಹಾಗೂ ಸಿಒಡಿ ಸೇವೆಯ ಮೂಲಕ ಪಾರ್ಸಲ್ ಕಳಿಸಿ ಗ್ರಾಹಕರಿಗೆ ಮೋಸಮಾಡುತ್ತಿದ್ದಾರೆ.
ಹಾಗಾಗಿ ಹೊರ ರಾಜ್ಯಗಳಿಂದ ಬರುವ ಇಂತಹ ಅಂಚೆಯ ಪಾರ್ಸಲ್ಲಗಳ ಬಗ್ಗೆ ಜನರು ಬಹಳಷ್ಟು ಜಾಗೃತಿವಹಿಸಬೇಕು. ಹಾಗೂ ಅಂಚೇ ಇಲಾಖೆಯು ಸಹ ಗ್ರಾಹಕರು ಪಾರ್ಸಲ್ ಪಾವತಿಸಿದ ಹಣದ ಮೌಲ್ಯದಷ್ಟು ವಸ್ತುಗಳು ಪಾರ್ಸಲ್ಲನೊಳಗೆ ಇಲ್ಲದಿದ್ದಾಗ ಗ್ರಾಹಕರಿಂದ ಒಂದು ಲಿಖಿತವಾಗಿ ದೂರು ಪಡೆದು ಪಾರ್ಸಲ್ ರವಾನಿಸಿದ ಸಂಸ್ಥೆಗೆ ಅಥವಾ ವ್ಯಕ್ತಿಗೆ ಹಣ ಪಾವತಿಸುವುದನ್ನು ತಡೆಹಿಡಿಯಲು ಕಾನೂನಾತ್ಮಕವಾಗಿ ಅಂಚೇ ಇಲಾಖೆಯ ನಿಯಮದಲ್ಲಿ ಅವಕಾಶವಿದ್ದು ಇಲಾಖೆಯು ಇದನ್ನು ಪಾಲಿಸಿದಲ್ಲಿ ಗ್ರಾಹಕರ ಹಿತ ಕಾಪಾಡುವುದಲ್ಲದೇ ಇಂತಹ ನಯವಂಚಕರ ಮೋಸಕ್ಕೆ ಒಂದಿಷ್ಟು ಕಡಿವಾಣ ಹಾಕಿ ವಂಚಕರ ವಿರುದ್ದ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಜರುಗಿಸಬಹುದು.
ಬಾಕ್ಸ್:
ಸರ್ ಪಾರ್ಸಲ್ಲನೊಳಗ ಬಹಳ ಕಿಮ್ಮತ್ತಿನ ಮೊಬೈಲ್ ಪೋನ ಇದೆ ಅಂತಾ ಆಸೆ ಇಟ್ಡುಕೊಂಡು ಹಣ ಪಾವತಿಸಿ ಪಾರ್ಸಲ್ ಪಡೆದು ನಾನು ಬಹಳ ಮೋಸಹೋಗಿದ್ದು ಯಾರಿಗೂ ಹೇಳದಂತ ಪರಸ್ಥಿತಿಯಾಗಿದೆ.
-ವಿರುಪಾಕ್ಷಪ್ಪ ವಾಲಿಕಾರ. ಸುಗನಹಳ್ಳಿ ಗ್ರಾಮಸ್ಥ

loading...