ಎಸ್‍ಸಿ-ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಸುಗ್ರಿವಾಜ್ಞೆ ಹೊರಡಿಸುವಂತೆ ಆಗ್ರಹ

0
67

ಕನ್ನಡಮ್ಮ ಸುದ್ದಿ-ವಿಜಯಪುರ
ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ವತಿಯಿಂದ ಎಸ್‍ಸಿ-ಎಸ್‍ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸುಗ್ರಿವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಶನಿವಾರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾದ ರಮೇಶ ಜಿಗಜಿಣಗಿ ಅವರ ಕಚೇರಿಯ ಮುಂದುಗಡೆ ದಲಿತ ವಿದ್ಯಾರ್ಥಿ ಪರಿಷತ್ ಸದಸ್ಯರು ಬೊಬ್ಬೆ ಇಟ್ಟು ಪ್ರತಿಭಟಿನೆ ನಡೆಸಿದರು.
ನಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾದ ರಮೇಶ ಜಿಗಜಿಣಗಿ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಸರ್ವೋಚ್ಛ ನ್ಯಾಯಾಲಯವು ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನ ವಿರೋಧಿ ನಿಲುವನ್ನು ಎಂದು ಎಸ್‍ಸಿ-ಎಸ್‍ಟಿಗಳಿಗೆ ನೀಡಲಾಗಿದ್ದ ಬಡ್ತಿ ಮೀಸಲಾತಿಯನ್ನು ಅಕ್ರಮ ಎಂದು ಅತ್ಯಂತ ಅವಹೇಳನಕಾರಿಯಾಗಿ ಘೋಷಿಸಿದೆ. ಈ ವರ್ಗದ ನೌಕರರಿಗೆ ನೀಡಲಾಗಿರುವ ಬಡ್ತಿಯನ್ನು ಹಿಂಪಡೆದು ಸೇವಾ ಹಿರಿತನವನ್ನು ಮರು ನಿಗದಿಗೊಳಿಸುವಂತಾಗಬೇಕು. ಹಾಗೂ ಈ ತೀರ್ಪು ಸಂವಿಧಾನ ವಿರೋಧಿಯಾಗುವದಷ್ಟೇ ಅಲ್ಲದೇ, ಮಾನವ ಹಕ್ಕುಗಳನ್ನೂ, ದಲಿತ ಸ್ವಾಭಿಮಾನವನ್ನು ದಾರುಣವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು
ಈ ತೀರ್ಪಿನಿಂದ ಎಸ್‍ಸಿ-ಎಸ್‍ಟಿ ನೌಕರರು ಪ್ರತಿಭಟಿಸುವ ಸಮಯ ಬಂದಿದೆ ಹಾಗೂ ಮೀಸಲು ಮತಕ್ಷೇತ್ರಗಳಿಂದ ಚುನಾಯಿತರಾಗುವ ಜನ ಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಸಮುದಾಯಕ್ಕಾಗುತ್ತಿರುವ ಅನ್ಯಾಯವನ್ನು ಶಾಸನ ಸಭೆಗಳಲ್ಲಿ ಮಾತನಾಡಿ ಸಮುದಾಯದ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಸಿಂದಗಿ ತಾಲೂಕ ಅಧ್ಯಕ್ಷ ಹರ್ಷವರ್ಧನ ಪೂಜಾರಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದೇ ಉದ್ಯೋಗವನ್ನು ನೀಡಿರುವದಿಲ್ಲ. ಅವರ ಸಾಮಥ್ರ್ಯಮತ್ತು ನಡುವಳಿಕೆಗಳ ಮೇಲೆಯೇ ಮುಂಬಡ್ತಿಯನ್ನು ನೀಡಲಾಗಿರುತ್ತದೆ. ಹೀಗಿರುವಾಗ ಹಿಂಬಡ್ತಿ ಮೀಸಲಾತಿ ಮಾಡಲು ತರಾತುರಿ ವಹಿಸುತ್ತಿರುವ ಸರ್ಕಾರಗಳು ಪೂರ್ಣ ಪ್ರಮಾಣದ ಮೀಸಲಾತಿ ಜಾರಿ ಮಾಡಲು 65 ವರ್ಷ ಕಳೆದರೂ ಇನ್ನೂವರೆಗೆ ಸಮುದಾಯಗಳಿಗೆ ನ್ಯಾಯ ದೊರೆಯುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಸಲಿಂ ಮುಲ್ಲಾ, ವಿಲಾಸ ಕುಮಟಗಿ, ಮಂಜುನಾಥ ಪಡಗಾನೂರ, ನಾಗೇಶ ಶಿವಶರಣ, ರವಿ ಸಿಂಗೆ ಮಾತನಾಡಿದರು.
ಈ ಸಮಯದಲ್ಲಿ ಜಿಲ್ಲಾ ಮತ್ತು ತಾಲೂಕು ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...