ಕಾರ್ಯಕರ್ತರಿಗೆ ನಾಯಕತ್ವದ ತರಬೇತಿ ಅವಶ್ಯ

0
22
loading...

ಬೈಲಹೊಂಗಲ: ಸಮಾಜದಲ್ಲಿ ಸಂಘಟನಾತ್ಮಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ನಾಯಕತ್ವದ ತರಬೇತಿ ಅತ್ಯಂತ ಅವಶ್ಯಕ ಎಂದು ತಾಪಂ ಸದಸ್ಯ ಜಗದೀಶ ಬೂದಿಹಾಳ ಹೇಳಿದರು.
ಸಮಿಪದ ಹೊಸುರ ಗ್ರಾಮದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಒಕ್ಕೂಟ ಪದಾಧಿಕಾರಿಗಳಿಗೆ ನಾಯಕತ್ವದ ಒಂದು ದಿನದ ತರಬೇತಿ ಕಾರ್ಯಾಗರ ಉದ್ಘಾಟಿಸಿ ಮಾತನಾಡಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂಸ್ಥೆಯ ಪದಾಧಿಕಾರಿಗಳು ನಾಯಕತ್ವದ ಗುಣಗಳನ್ನು ಬೇಳಸಿಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ತಮ್ಮ ಗುಂಪನ್ನು ಸದಾ ಚಟುವಟಿಕೆಗಳಿಂದ ಮುನ್ನೆಡೆಸಬೇಕು. ಎಂದು ಹೇಳಿದರು. ಸ್ಥಳಿಯ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಬಾಳೇಕುಂದರಗಿ ಉಪನ್ಯಾಸ ನೀಡಿ ಗ್ರಾಮೀಣ ಪ್ರದೇಶಗಳಲ್ಲಿರುವ ಸಂಘಟನೆಯ ಪದಾಧಿಕಾರಿಗಳು ತಮ್ಮಲ್ಲಿ ವಿಮರ್ಶಾತ್ಮಕ ಸೃಜನಶೀಲತೆಯ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ಇಳಿದಲ್ಲಿ ಒಬ್ಬ ಒಳ್ಳೆಯ ನಾಯಕರಾಗಲು ಸಾಧ್ಯ ಎಂದರು. ಒಕ್ಕೂಟದ ಸದಸ್ಯರ ಜೋತೆ ಉತ್ತಮ ಭಾಂದವ್ಯ, ಜನರಿಗೆ ತಿಳಿಯುವ ಸ್ಪಷ್ಟವಾದ ಮಾತುಗಾರಿಕೆ, ಸಾಮರಸ್ಯದ ಭಾವಣೆಗಳನ್ನು ಹೊಂದಿ ಧೈರ್ಯದಿಂದ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುವದರಿಂದ ಉತ್ತಮ ನಾಯಕರಾಗಿ ಹೊರಹೊಮ್ಮಿ ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಬಹುದು. ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರಾಜ್ಯಾದ್ಯಂತ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಗ್ರಾಮೀಣ ಬಡ ಜನತೆಗೆ ಆರ್ಥಿಕ ಸಾಹಾಯ ಹಾಗೂ ಸಮಾಜ ಉಪಯೋಗಿಕ ಕಾರ್ಯ ಶ್ಲಾಘನಿಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೊಸುರ ವಲಯದ ಅನೇಕ ಪದಾಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಯೋಜನಾಧಿಕಾರಿ ಸಂಜುಗೌಡಾ ವೇದಿಕೆಯಮೇಲಿದ್ದರು. ವಲಯ ಮೇಲ್ವಿಚಾರಕ ನಾಗರಾಜ ಸೇಬನ್ನವರ ಸ್ವಾಗತಿಸಿದರು. ಮಂಜುಳಾ ಕಂಬಾರ ಕಾರ್ಯಕ್ರಮ ನೀರೂಪಿಸಿ ವಂದಿಸಿದರು.

loading...