ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ದಕ ಸಂಘದ ನಿರ್ದೇಶಕರ ಸ್ಥಾನಗಳಲ್ಲಿ ಜಯ ಸಾಧಿಸಿದ ಮಾಜಿ ಶಾಸಕ ಸುರೇಶ ಮಾರಿಹಾಳ ಬೆಂಬಲಿತ ಅಭ್ಯರ್ಥಿಗಳು.

ಕನ್ನಡಮ್ಮ ಸುದ್ದಿ, ಚೆನ್ನಮ್ಮ ಕಿತ್ತೂರ.

ಕಿತ್ತೂರ ನಾಡ ಲಿಂಗಾಯತ ವಿದ್ಯಾವರ್ದಕ ಸಂಘದ ನಿರ್ದೇಶಕರ ಸ್ಥಾನಗಳಲ್ಲಿ ಜಯ ಸಾಧಿಸಿದ ಮಾಜಿ ಶಾಸಕ ಸುರೇಶ ಮಾರಿಹಾಳ ಬೆಂಬಲಿತ ಅಭ್ಯರ್ಥಿಗಳು.
ಚನ್ನಮ್ಮನ ಕಿತ್ತೂರ : ಪಟ್ಟಣದ ಪ್ರತಿಷ್ಠೀತ ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ದಕ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಸುರೇಶ ಮಾರಿಹಾಳ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳನ್ನು ಪಡೆಯುವÀ ಮೂಲಕ ರವಿವಾರ ಅಧಿಕಾರ ಚುಕ್ಕಾಣೆ ಹಿಡಿದಿದ್ದಾರೆ.
ಕಾಲೇಜಿನ ಒಟ್ಟು 11 ನಿರ್ದೆಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸುರೇಶ ಮಾರಿಹಾಳ ಬೆಂಬಲಿತ ಅಭ್ಯರ್ಥಿಗಳಾದ ಈರಣ್ಣ ಮಾರಿಹಾಳ, ನಿಜಲಿಂಗಯ್ಯಾ ಹಿರೇಮಠ, ವಿಶ್ವನಾಥ ಶೆಟ್ಟರ, ಜಗದೀಶ ಬಿಕ್ಕಣ್ಣವರ, ಮಹಾಭಳೇಶ್ವರ ದಳವಾಯಿ, ಉಮಾಕಾಂತ ಭಾರತಿ, ದೊಡಗೌಡ ಪಾಟೀಲ, ವೀರುಪಾಕ್ಷಗೌಡ ಪಾಟೀಲ ಜಯ ಸಾಧಿಸಿ ಅಧಿಕಾರದ ಚುಕ್ಕಾಣೆ ಹಿಡಿದಿದ್ದಾರೆ.
ನಿಂಗಪ್ಪ ತಡಕೋಡ, ಶಂಕರ (ಬಾಬು) ವಳಸಂಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜಯ ಸಾಧಿಸಿದ್ದು, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಒಟ್ಟು 11 ಸ್ಥಾನಗಳಿಗೆ 21 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದರು. ಒಟ್ಟು 220 ಮತಗಳು ಚಲಾವಣೆಗೊಂಡಿದ್ದವು.
ಸುರೇಶ ಮಾರಿಹಾಳ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾಧಿಕಾರಿಯಾಗಿ ಸಿ.ವಾಯ್.ಪರೀಟ್ ಕಾರ್ಯ ನಿರ್ವಹಿಸಿದರು.

loading...