ಕಿತ್ತೂರು ಪೋಲಿಸ್ರಿಂದ ಮನೆಗಳ್ಳರ ಬಂಧನ

loading...


ಕಿತ್ತೂರು ಪೋಲಿಸ್ರಿಂದ ಮನೆಗಳ್ಳರ ಬಂಧನ
ಚನ್ನಮ್ಮ ಕಿತ್ತೂರು : ಮೂರು ಜನ ಮನೆಗಳ್ಳರ ಬಂಧನ, ರೂ 98 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡ ಕಿತ್ತೂರು ಪೋಲಿಸರು.
ತಾಲೂಕಿನ ಬಚ್ಚನಕೆರಿ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ರಾಜಪ್ಪ ಕಾಗೆಪ್ಪಗೋಳ, ಬಸಯ್ಯ ಹಿರೇಮಠ, ಅಪ್ಪಯ್ಯ ಕೋಲಕಾರ ಇವರಿಗೆ ಸೇರಿದ ಮನೆಗಳು ಕಳ್ಳತನವಾಗಿದ್ದವು ಈ ಕುರಿತು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಳ್ಳರ ಪತ್ತೆಗೆ ಕಿತ್ತೂರು ಪೋಲಿಸರು ವ್ಯಾಪಕ ಜಾಲ ಬೀಸಿ ಆರೋಪಿಗಳಾದ ರಮೇಶ ಕಾಗೆಪ್ಪಗೋಳ, ಮಂಜುನಾಥ ತಳವಾರ, ಶಿವಾನಂದ ಕರಡಿ ಈ ಮೂವರನ್ನು ವಶಪಡಿಸಿಕೊಂಡು ತನಿಖೆ ನಡೆಸಿದಾಗ ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡ ಆರೋಪಿಗಳು ರೂ 98 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಕಿತ್ತೂರು ಪಿ.ಎಸ್.ಐ ಮಲ್ಲಿಕಾರ್ಜುನ ಕುಲಕರ್ಣಿ ನೇತೃತ್ವದಲ್ಲಿ ಸಿಬ್ಬಂಧಿಗಳಾದ ಲಿಂಗರಾಜ ಘಳಗಿ, ಸುನೀಲ ಮೂರಗೋಡ ಈ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಚೇತನ ಬುದ್ನಿ, ಎಚ್.ಎಲ್.ಭಜಂತ್ರಿ, ಈಶ್ವರ ಜಿನ್ನವ್ವಗೋಳ, ಐ.ಬಿ.ಖಜಗನಟ್ಟಿ ಪೋಲಿಸ್ ಸಿಬ್ಬಂದಿಗಳು ಇದ್ದರು.
ಬೆಳಗಾವಿ ಜಿಲ್ಲಾವರಿಷ್ಠಾಧಿಕಾರಿ ರವಿಕಾಂತೇಗೌಡ, ಬೈಲಹೊಂಗಲ ಡಿ.ವೈ.ಎಸ್‍ಪಿ ಗಜಪತಿ ಗುಡಾಜ, ಸಿಪಿ.ಐ ಸಂಗನಗೌಡ ಕಿತ್ತೂರು ಪೋಲಿಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

loading...