ಕಿರುಕುಳ ನೀಡಿದ ಪಿಎಸ್‍ಐ ಮೇಲೆ ಕ್ರಮ ಕೈಗೊಳ್ಳದ ಎಸ್ಪಿ !

0
172
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:10 ಖಾನಾಪುರ ತಾಲೂಕಿನ ಪಿಎಸ್‍ಐ ಪರಶುರಾಮ ಪುಜಾರಿ ಉದ್ದಟ್ಟನದಿಂದ ತಪ್ಪು ಮಾಡದ ವ್ಯಕ್ತಿಯ ಮೇಲೆ 307 ಪ್ರಕರಣದ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಿದ್ದು ಕಣ್ಣ ಮುಂದೆ ಇದ್ದರೂ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತ್ರ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
ವೆಂಕಟರಾಮ ಕಾಮತ ಎಂಬುವರು ತಮ್ಮ ಜಮೀನು ವಿಷಯವಾಗಿ ಮುಕುಂದ ಕ್ಷತ್ರಿಯ ಎಂಬುವರು ದೂರು ನೀಡಿದ್ದರೂ ಆ ದೂರಿನಲ್ಲಿ ಸ್ಪಷ್ಟವಾಗಿ ಅವರು ಕಲ್ಲಿನಿಂದ ಎಸೆದರೂ ತಮಗೆ ತಾಗಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದರೂ ಸುಮಾರು 72 ವರ್ಷದ ಕಾಮತ ಅವರನ್ನು ಪರುಶುರಾಮ ಪೂಜಾರಿ 307 ಪ್ರಕರಣದ ದಾಖಲಿಸಿ ವಿನಾಕಾರಣ ಅವರನ್ನು ಹಿಂಡಲಗಾ ಕಾರಾಗೃದಲ್ಲಿ 10 ದಿನಗಳ ಕಾಲ ಜೈಲಿನಲ್ಲಿ ಕಳೆಯುವಂತೆ ಮಾಡಿದ್ದರು.
ಇದನ್ನು ಪ್ರಶ್ನಿಸಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ವೆಂಕಟರಾಮ ಕಾಮತ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಖಾನಾಪುರ ಪಿಎಸ್‍ಐ ಪರಶುರಾಮ ಪೂಜಾರಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಪೂಜಾರಿ ಅವರ ರಕ್ಷಣೆಗೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವೆಂಕಟರಾಮ ಕಾಮತ ಅವರು ಖಾನಾಪುರ ಪಿಎಸ್‍ಐ ತಪ್ಪು ಮಾಡದ ತಮ್ಮನ್ನು ಎಫ್‍ಐಆರ್‍ನಲ್ಲಿ ಸ್ಪಷ್ಟವಾಗಿ ವಿಷಯ ತಿಳಿಸಿದರೂ ಕೊಲೆ ಮಾಡಲು ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಪಿಎಸ್‍ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಮುಕುಂದ ಕ್ಷತ್ರಿಯವರಿಂದ ಹಣ ಪಡೆದುಕೊಂಡು ವೆಂಕಟರಾಮ ಕಾಮತ ಅವರ ಮೇಲೆ ವಿನಾಕಾರಣ ಕಿರುಕುಳ ನೀಡಿ ಅವರ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ನಾಶಪಡಿಸಲು ಕಾರಣನಾದ ಪಿಎಸ್‍ಐ ಅವರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂಬುದು ಮಾತ್ರ ನಿಗೂಢವಾಗಿದೆ.
ಖಾನಾಪುರ ಪಿಎಸ್‍ಐ ಪರಶುರಾಮ ಪೂಜಾರಿ ಅವರ ಮೇಲೆ ಈ ಹಿಂದೆ ಎರಡು ಬಾರಿ ಬಿಜೆಪಿ ಕಾರ್ಯರ್ತರು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಅವರನ್ನು ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರೂ ಇಲ್ಲಿಯವರೆಗೆ ಪೂಜಾರಿ ಮೇಲೆ ಕ್ರಮ ಜರುಗಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

loading...