ಕೈಗಾರಿಕೆ ಮೇಲಿಂದ ಬಿದ್ದು ವ್ಯಕ್ತಿ ಸಾವು

0
47
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಇಲ್ಲಿನ ಅನೋಳ ಪ್ರದೇಶದಲ್ಲಿರುವ ಕೆ ಕೆ. ಕೈಗಾರಿಕೆಯಲ್ಲಿ ಸಿಮೆಂಟ್ ಪತ್ರೆ ಹೊಂದಿಸಲು ಹೋಗಿ ಪತ್ರೆ ಒಡೆದು ಮೇಲಿಂದ ಬಿದ್ದು ಸ್ಥಳದಲ್ಲಿಯೆ ವ್ಯಕ್ತಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 11 ಕ್ಕೆ ನಡೆದಿದೆ.
ಮೃತ ವ್ಯಕ್ತಿಯು ಸಹಪುರದ ಶಾಸ್ತ್ರೀ ನಗರದ ಗಜಾನನ ರಾಮಚಂದ್ರ ಗೋಡ್ಸೆ (48) ಎಂಬುವವನು ಬೆಳಿಗ್ಗೆ ಕೈಗಾರಿಕೆಯ ದುರಸ್ಥಿಗೊಂಡ ಪತ್ರೆಯನ್ನು ತೆಗೆದು ಬೇರೆ ಹೊಸ ಪತ್ರೆಯನ್ನು ಹೊಂದಿಸುವ ಕಾರ್ಯದಲ್ಲಿ ತೊಡಗಿದ್ದ, ಆ ಸಂದರ್ಭದಲ್ಲಿ ತಾನು ನಿಂತಿರುವ ಪತ್ರೆ ಪಡೆದು ಪರಿಣಾಮ ಮೇಲಿಂದ ಬಿದ್ದು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...