ಕೋಚ್ ಆಯ್ಕೆ ಕುರಿತು ನನ್ನ ಅಭಿಪ್ರಾಯ ಹೇಳುತ್ತೇನೆ: ಕೊಹ್ಲಿ

0
27
loading...

ನವದೆಹಲಿ: ಅನಿಲ್ ಕುಂಬ್ಳೆ ಕೋಚ್ ಹುದ್ದಗೆ ರಾಜಿನಾಮೆ ನೀಡಿದಾಗಿನಿಂದ ಭಾರಿ ಚರ್ಚೆಗೆ ಗುರಿಯಾಗಿರುವ ಟೀಂ ಇಂಡಿಯೋ ಕೋಚ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ತುಟಿ ಬಿಚ್ಚಿದ್ದು, ಬಿಸಿಸಿಐ ಕೇಳಿದರೆ ಮಾತ್ರ ತಾವು ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಇಂದು ವೆಸ್ಟ್ ತಂಡದ ವಿರುದ್ಧ 3ನೇ ಏಕದಿನ ಪಂದ್ಯವನ್ನಾಡುತ್ತಿದ್ದು, ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯೋ ಕೋಚ್ ಆಯ್ಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ವೈಯುಕ್ತಿಕವಾಗಿ ಹೇಳುವುದಾದರೆ ಕೋಚ್ ಆಯ್ಕೆ ಕುರಿತಂತೆ ನಾನು ಏನೂ ಹೇಳುವುದಿಲ್ಲ. ಆದರೆ ಭಾರತ ತಂಡದ ನಾಯಕನಾಗಿ ಮತ್ತು ತಂಡದ ಇತರೆ ಆಟಗಾರರ ಪ್ರತಿನಿಧಿಯಾಗಿ ಕೋಚ್ ಆಯ್ಕೆ ಬಗ್ಗೆ ತಂಡದ ಅಭಿಪ್ರಾಯವನ್ನಷ್ಟೇ ಹೇಳಬಲ್ಲೆ ಎಂದು ಹೇಳಿದ್ದಾರೆ.
ನಾವು ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇದು ತಂಡದ ಮೇಲೆ ನಮಗಿರು ಗೌರವ. ಬಿಸಿಸಿಐ ನಾವು ಕೇವಲ ಸಲಹೆಗಳನ್ನು ಮಾತ್ರ ನೀಡಬಲ್ಲೆವು. ನಿರ್ಧಾರವನ್ನಲ್ಲ. ಅಂತೆಯೇ ಕೋಚ್ ಆಯ್ಕೆ ಕುರಿತಂತೆ ತಂಡದ ಕೆಲವು ಸಲಹೆಗಳನ್ನು ಈಗಾಗಲೇ ಬಿಸಿಸಿಐಗೆ ನೀಡಲಾಗಿದೆ. ಆದರೆ ಇವುಗಳನ್ನು ಮಾಧ್ಯಮಗಳ ಮುಂದೆ ಪ್ರಕಟಪಡಿಸಲು ಸಾಧ್ಯವಿಲ್ಲ ಎಂದೂ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.ಟೀಂ ಇಂಡಿಯಾ ಕೋಚ್ ಹುದ್ದೆಗೆ ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರೂ ಕೂಡ ಅರ್ಜಿ ಸಲ್ಲಿಸಿದ್ದಾರೆ.

loading...