ಖಾನಾಪುರದಲ್ಲಿ ಮುಂದುವರೆದ ಮಳೆ

0
28
loading...

ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಅರಣ್ಯ ಭಾಗದಲ್ಲಿ ಗುರುವಾರವೂ ಮಳೆ ಮುಂದುವರೆದಿದೆ. ಮೂಲಗಳ ಪ್ರಕಾರ ಗುರುವಾರ ಮುಂಜಾನೆಯವರೆಗೆ ಕಣಕುಂಬಿಯಲ್ಲಿ 71 ಮಿಮೀ, ನಾಗರಗಾಳಿಯಲ್ಲಿ 17 ಮಿಮೀ, ಲೋಂಡಾದಲ್ಲಿ 42 ಮಿಮೀ, ಕಕ್ಕೇರಿಯಲ್ಲಿ 12 ಮಿಮೀ, ಪಟ್ಟಣದಲ್ಲಿ 15 ಮಿಮೀ, ಅಸೋಗಾದಲ್ಲಿ 14 ಮಿಮೀ, ಜಾಂಬೋಟಿಯಲ್ಲಿ 83 ಮಿಮೀ ಮತ್ತು ಗುಂಜಿ ಸುತ್ತಮುತ್ತ 27 ಮಿಮೀ ಮಳೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಸಕಾಲದಲ್ಲಿ ಸುರಿಯದೇ ಮಾಯವಾಗಿ ಆತಂಕ ಸೃಷ್ಟಿಸಿದ್ದ ಮಳೆ ಇತ್ತೀಚಿನ ದಿನಗಳಲ್ಲಿ ನಿಯಮಿತವಾಗಿ ಸುರಿಯುವ ಮೂಲಕ ಮಲೆನಾಡಿನ ಸೊಬಗನ್ನು ಮರಳಿಸಿದೆ. ಭತ್ತದ ಬೆಳೆ ಚಿರುರೊಡೆಯುವ ಸಮಯದಲ್ಲಿ ಸುರಿದ ರೈತಾಪಿ ಜನರಿಗೆ ನೆಮ್ಮದಿ ತಂದಿದೆ ಎಂದು ತಾಲೂಕಿನ ಹೊಣಕಲ್ ಗ್ರಾಮದ ರೈತರು ಅಭಿಪ್ರಾಯ ಪಟ್ಟಿದ್ದಾರೆ.

loading...