ಚನ್ನಮ್ಮ ಕಿತ್ತೂರಿನ ಬಸ್ ನಿಲ್ದಾಣಕ್ಕೆ ಬೇಟಿ ನೀಡಿದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯ್ಕ

loading...

ಚನ್ನಮ್ಮ ಕಿತ್ತೂರು : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯ್ಕ ಚನ್ನಮ್ಮ ಕಿತ್ತೂರಿನ ಬಸ್ ನಿಲ್ದಾಣಕ್ಕೆ ಬೇೀಟಿ ನೀಡಿ ಇಲ್ಲಿನ ವ್ಯವಸ್ಥತೆ ಬಗ್ಗೆ ಪರಿಶೀಲನೆ ನಡೆಸಿದರು.
ನಿಲ್ದಾಣದ ಶೌಚಾಲಯಕ್ಕೆ ಭೇಟಿ ನೀಡಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಅಲ್ಲದೆ ನೂತನ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲು ಸೂಚಿಸುವದಾಗಿ ತಳಿಸಿದ ಅವರು, ಬಸ್ ನಿಲ್ಧಾಣದ ಹಿಂದೆ ಇರುವ ಮಳಿಗೆಗಳ ಮುಂದೆ ನಿಂತಿರುವ ನೀರನ್ನು ಹಾಗೂ ಗಟಾರನ್ನು ಸ್ವಚ್ಚಗೊಳಿಸಬೇಕು ಹಾಗೂ ಹಿಂಬದಿ ರಸ್ತೆಯಿಂದ ಬಸ್ ನಿಲ್ದಾಣ ಪ್ರವೇಶಿಸುವ ಮಾರ್ಗದಲ್ಲಿ ಹಾಗೂ ಮಳಿಗೆಗಳ ಮುಂದೆ ದ್ವಿಚಕ್ರ ವಾಹನಗಳ ಸಾಲು ನಿಲುಗಡೆಯಾಗಿರುವದನ್ನು ಕಂಡು ಇಲ್ಲಿ ವಾಹನಗಳನ್ನು ನಿಲ್ಲಿಸದಂತೆ ಹಾಗೂ ನೋ ಪಾರ್ಕಿಂಗ್ ಫಲಕವನ್ನು ಅಳವಡಿಸುವಂತೆ ನಿಲ್ದಾಣಾಧಿಕಾರಿಗೆ ಸೂಚಿಸಿದ ಅವರು ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿಲಾಗುವುದು ಎಂದ ಅವರು, ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ನಿಲ್ದಾಣಾಧಿಕಾರಿಯವರಿಗೆ   ಸೂಚಿಸಿದರು.
ನಿಲ್ದಾಣಾಧಿಕಾರಿ ಎಂ.ಬಿ.ಹೊಸಮನಿ, ತಾಂತ್ರಿಕ ಸಿಬ್ಬಂದಿ ಸಿ.ಆರ್.ಗೋಕಾಕ, ಎಂ.ಎ.ಹುದ್ದಾರ ಸೇರಿದಂತೆ ಇತರರು ಇದ್ದರು.

loading...