ಚನ್ನಮ್ಮ ಕಿತ್ತೂರು : ಅರಣ್ಯದಲ್ಲಿ ಜಂಗಲವಾಲೇ ಬಾಬಾರ ಚಾತುರ್ಮಾಸ ಕಾರ್ಯಕ್ರಮ ದಿ. 25 ರಿಂದ

 

ಕನ್ನಡಮ್ಮ ಸುದ್ದಿ,
ಚನ್ನಮ್ಮ ಕಿತ್ತೂರು ಃ ರಾಷ್ಟ್ರ ಸಂತ ಮುನಿಶ್ರೀ ಚಿನ್ಮಯಸಾಗರ ಮಹಾರಾಜ ಜಂಗಲವಾಲೇ ಬಾಬಾ ಅವರ ನಾಲ್ಕು ತಿಂಗಳ ಸರ್ವ ಧರ್ಮದ ಚಾತುರ್ಮಾಸ ಕಾರ್ಯಕ್ರಮ ತಾಲೂಕಿನ ದೇಗಾಂವ-ಹೊನ್ನಾಪೂರ ಅರಣ್ಯದಲ್ಲಿ ಜರುಗಲಿದೆ.
ದಿ. 24 ರಂದು ಮುನಿಶ್ರೀ ಚಿನ್ಮಯಸಾಗರ ಮಹಾರಾಜ ತಿಗಡೊಳ್ಳಿ ಗ್ರಾಮದಿಂದ ಸಾವಿರಾರು ಭಕ್ತರೊಂದಿಗೆ ದೇಗಾಂವ ಗ್ರಾಮಕ್ಕೆ ತೆರಳಿ ಧಾರ್ಮಿಕ ವಿದಿ ವಿಧಾನಗಳನ್ನು ಪೂರೈಸಲಿದ್ದಾರೆ.
ದಿ. 25 ರಂದು ಮುನಿಶ್ರೀ ಚಿನ್ಮಯಸಾಗರ ಮಹಾರಾಜ 8 ಗಂಟೆಗೆ ರವಿ ಪುಷ್ಯ ನಷ್ಕತ್ರದ ಶುಭ ಮರ್ಹೋತದಲ್ಲಿ ಸರ್ವ ಧರ್ಮದ ಐದು ಸಾವಿರ ಭಕ್ತರ, ಮಂಗಳವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ತೀರ್ಧಂಕರ ಜೀನಬಿಂಬದೊಂದಿಗೆ ನಾಲ್ಕು ತಿಂಗಳ ದೇಗಾಂವ-ಹೊನ್ನಾಪೂರ ಅರಣ್ಯದಲ್ಲಿ ಪ್ರವೇಶಿಸಿ ತಪ ಸಾಧನೆ ಮಾಡಲು ಮಂಗಲ ಪ್ರವೇಶ ಮಾಡಲಿದ್ದಾರೆ.
ದಿ. 28 ರಂದು ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ 50ನೇ ದಿಕ್ಷಾ ಸುವರ್ಣ ಮಹೋತ್ಸವದ ಭವ್ಯ ಕಾರ್ಯಕ್ರಮ ಜರುಗಲಿದೆ.
ಅತಿ ವಿಶಿಷ್ಠ ಪೂಜೆ, ಆರಾಧನೆ, ಶಿಕ್ಷಕ, ಮಹಿಳಾ, ಯುವಕ, ಸಮ್ಮೇಳನ ವೃಕ್ಟಾರೋಪನ, ಪಿಂಭಿ ಪರಿವರ್ತನ, ವಿಧ್ಯಾರ್ಥಿ ಉದ್ಬೊಧನ ಮತ್ತು ಮೌಂಜಿ ಬಂಧನ, ಮುನಿಶ್ರೀಗಳ ಪ್ರತಿದಿನ ಪ್ರವಚನ, ಖಠೋರ ತಪ ಸಾಧನೆ ನಡೆಯಲಿದೆ. ಪ್ರತಿ ದಿನ ಸಸ್ಯಾಹಾರಿ ಮತ್ತು ನಶಾಮುಕ್ತರಾಗುವ ಎಲ್ಲ ಸಮಾಜ ಜಾತಿ ಜನಾಂಗಕ್ಕೆ ಉಪದೇಶ ಸೇರಿದಂತೆ ಅನೇಕ ಧಾರ್ಮಿಕ, ಸಮಾಜಿಕ, ಶೈಕ್ಷಣಿಕ ವಿಶಿಷ್ಠ ಕಾರ್ಯಕ್ರಮಗಳು ಜರುಗಲಿವೆ.
ರಾಷ್ಟ್ರ ಸಂತ ಮುನಿಶ್ರೀ ಚಿನ್ಮಯಸಾಗರ ಮಹಾರಾಜ ಜಂಗಲವಾಲೇ ಬಾಬಾ ಮಾತನಾಡಿ, ಜಾತಿ, ಮತ, ಪಂಥಗಳ ಬೇದ ಭಾವವಿಲ್ಲದೆ ಮಾನವೀಯ ಧರ್ಮವನ್ನು ಮತ್ತು ದ್ವೇಷ ಅಸೂಯೆ ತಾರತಮ್ಯಗಳ ಹೋಗಲಾಡಿಸಲು ಆದ್ಯಾತ್ಮಕತೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಚರ್ತುಮಾಸ ಕಾರ್ಯಕ್ರಮ ಆಯೋಜಿಸಿದೆ. ದೇಶ ಅಭಿವೃದ್ಧಿಯಾಗಬೇಕಾದರೆ ದೀನ ದಲಿತರ, ಹಿಂದುಳಿದವರ ಉದ್ದಾರವಾಗಬೇಕು ತಾವು ಚರ್ತುಮಾಸಕ್ಕೆ ಗುಡ್ಡ ಗಾಡ ಆಯ್ಕೆ ಮಾಡಲು ಸಿದ್ದಿ ಪ್ರಾಪ್ತಿ ಕಾರಣ. ಎಂದ ಅವರು ಚರ್ತುಮಾಸದ ಉದ್ದೇಶವೆ ತ್ಯಾಗದ ಮಹತ್ವವನ್ನು ಸಾರುವದಾಗಿದೆ. ಮುನಿಗಳ ಆದರ್ಶ ಪಾಲಣೆ ಮಾಡುವದರ ಜೊತೆಗೆ ಮನುಷ್ಯನಲ್ಲಿ ಆವರಿಸಿರುವ ಕಾಮ, ಕ್ರೋಧ, ಮದ ಮತ್ಸರವನ್ನು ಬೀಡಲು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳೀದರು. ಈ ಕಾರ್ಯಕ್ರಮವನ್ನು  ಸುಮನಲತಾ ಪ್ರಕಾಶ ಮೋದಿ ಆಯೋಜಿಸಿದ್ದಾರೆ.