ಚನ್ನಮ್ಮ ಕಿತ್ತೂರು ಎರಡು ತಿಂಗಳಿಂದ ವೇತನ ನೀಡದ ಪಟ್ಟಣ ಪಂಚಾಯತಿ

loading...

ಚಿತ್ರ ಚನ್ನಮ್ಮ ಕಿತ್ತೂರು  ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿರುವ ಪೌರ ಕಾರ್ಮಿಕರು.

ಚನ್ನಮ್ಮನ ಕಿತ್ತೂರು : ಸರ್ಕಾರದ ನಿಯಮಾವಳಿ ಪ್ರಕಾರ ಪೌರ ಕಾರ್ಮಿಕರ ವೇತನ ನೀಡುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಜೊತೆಗೆ ಪೌರ ಕಾರ್ಮಿಕರು ಬುಧವಾರ ವಾಗ್ವಾದ ನಡೆಸಿದರು.
ಕಳೆದ 2 ತಿಂಗಳಿಂದ ಪಟ್ಟಣ ಪಂಚಾಯಿತಿ ವೇತನ ನೀಡಿಲ್ಲ. ಸರ್ಕಾರದ ಸುತ್ತೊಲೆ ಪ್ರಕಾರ ವೇತನವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಎಂದು ಆರೋಪಿಸಿದ ಪೌರ ಕಾರ್ಮಿಕರು ಪಟ್ಟಣದಲ್ಲಿ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೆವೆ. ಯಾವ ತಪ್ಪನ್ನು ಮಾಡಿದ್ದೆವೆಂದು ಈ ರೀತಿ ವೇತನ ಕೊಡದೆ ಸತಾಯಿಸುತ್ತಿದ್ದಿರಾ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನೀಸಿದರು.
ಪಟ್ಟಣದ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡಲು ಹಾಗೂ ಪಟ್ಟಣದ ಸ್ವಚ್ಚತೆ ಹಾಗೂ ಸೌಂದರ್ಯ ಕಾಪಾಡಲು ಮಾತ್ರ ಪೌರ ಕಾರ್ಮೀಕರ ಅವಶ್ಯಕತೆಯಿದೆ ಆದರೆ ವೇತನ ಮಾತ್ರ
ಅಧ್ಯಕ್ಷ ಹನೀಫ್ ಸುತಗಟ್ಟಿ, ಉಪಾಧ್ಯಕ್ಷ ಕಿರಣ ಪಾಟೀಲ, ಸದಸ್ಯ ಕಿರಣ ವಾಳದ, ಪೌರ ಕಾರ್ಮಿಕರಾದ ನಾಗಪ್ಪ ಲಿಂಗಮೇತ್ರಿ, ಆನಂದ ಲಿಂಗಮೇತ್ರಿ, ಮಹಾಂತೇಶ ವಕ್ಕುಂದ, ಸೇರಿದಂತೆ ಇತರರು ಇದ್ದರು.

loading...