ಚನ್ನಮ್ಮ ಕಿತ್ತೂರು: ಕಿತ್ತೂರ ತಾ.ಪಂಗೆ ಗಂದಿಗವಾಡ,ಇಟಗಿ, ಕೇರವಾಡ, ಮಂಗೇನಕೊಪ್ಪ, ತಾ.ಪಂ ಕ್ಷೇತ್ರಗಳನ್ನು ಸೇರಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ

loading...


ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.
ಚನ್ನಮ್ಮ ಕಿತ್ತೂರು- ಚನ್ನಮ್ಮನ ಕಿತ್ತೂರನ್ನು ಸಂಪೂರ್ಣ ತಾಲೂಕನ್ನಾಗಿ ಘೋಷಿಸಿ ಅಭಿವೃದ್ಧಿ ಪಡಿಸುವುದರ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಿತ್ತೂರಿಗೆ ತಾಲೂಕಾ ಪಂಚಾಯತಿ ರಚಿಸುವಂತೆ ಆದೇಶ ಹೊರಡಿಸಿದ್ದು ಸ್ವಾಗತಾರ್ಹ ಕ್ರಮ ಇದನ್ನು ಗಡಿನಾಡು ಹಿತರಕ್ಷಣಾ ವೇದಿಕೆ ಸ್ವಾಗತಿಸಿದ್ದು ವೇದಿಕೆಯ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಕಿತ್ತೂರು ದಂಡಾಧಿಕಾರಿಗಳ ಕಚೇರಿಗೆ ವೇದಿಕೆಯ ಕಾರ್ಯಕರ್ತರು ಆಗಮಿಸಿ ಮುಖ್ಯಮಂತ್ರಿಗಳಿಗೆ ಕಿತ್ತೂರ ತಾ.ಪಂಗೆ ಹಲವು ಕ್ಷೇತ್ರಗಳನ್ನು ಅಳವಡಿಸಲು ತಹಶೀಲ್ದಾರ ಪ್ರವೀಣ ಹುಚ್ಚನ್ನವರ ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗಡಿನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಭಂಗಿ ಮಾತನಾಡಿ ಪ್ರಸಕ್ತ ಖಾನಾಪೂರ ತಾಲೂಕಾ ಪಂಚಾಯತಿಗೆ ಒಳಪಡುವ ಗಂದಿಗವಾಡ, ಇಟಗಿ, ಕೇರವಾಡ, ಮಂಗೇನಕೊಪ್ಪ, ತಾಲೂಕಾ ಪಂಚಾಯತಿ ಕ್ಷೇತ್ರಗಳನ್ನು ನೂತನವಾಗಿ ರಚನೆಯಾದ ಕಿತ್ತೂರು ತಾಲೂಕು ಪಂಚಾಯತಿಗೆ ಅಳವಡಿಸಬೇಕು. ಹಾಗೂ ಈ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಕಿತ್ತೂರು ತಾಲೂಕಿಗೆ ಸೇರ್ಪಡೆಗೊಳಿಸಬೇಕು. ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕ್ಷೇತ್ರಗಳು ಐತಿಹಾಸಿಕವಾಗಿ ಕಿತ್ತೂರು ಸಂಸ್ಥಾನಕ್ಕೆ ಒಳಪಟ್ಟಿದ್ದು ಹಾಗೂ ಖಾನಾಪೂರ ಎಮ್.ಇ.ಎಸ್ ಶಾಸಕರಿಂದ ಕಡೆಗಣಿಸಲ್ಪಟ್ಟಿದ್ದು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಇಂದಿಗೂ ಇಲ್ಲಿ ಮೂಲಭೂತ ಸೌಲಭ್ಯಗಳು ಜನರಿಗೆ ಸಿಗುತ್ತಿಲ್ಲಾ ಈ ಭಾಗ ಅಭಿವೃದ್ದಿ ಹೊಂದಬೇಕಾದರೆ ಇವುಗಳನ್ನು ಕಿತ್ತೂರು ತಾ.ಪಂ.ಗೆ ಸೇರಿಸುವುದು ಅನಿರ್ವಾಯವಾಗಿದ್ದು ಜಿಲ್ಲಾಧಿಕಾರಿಗಳು ಈ ಕಡೆ ಗಮನ ಹರಿಸಬೇಕು ಎಂದರು.
ಈ ಕುರಿತು ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿಗಳಿಗೆ ಹಾಗೂ ಪಂಚಾಂiÀÀುತ್ ರಾಜ್ಯ ಸಚಿವರಿಗೆ , ಕಂದಾಯ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹಾಗೂ ಸೂಕ್ತ ಕ್ರಮ ಕೈಕೊಳ್ಳದಿದ್ದರೆ ಉಗ್ರ ಪ್ರತಿಭಟಣೆ ನಡೆಸುವುದಾಗಿ ಎಂದು ಬಸವರಾಜ ಭಂಗಿ ಈ ಮೂಲಕ ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಕಿತ್ತೂರ ತಾಲೂಕಾಧ್ಯಕ್ಷ ಕಲ್ಲಪ್ಪ ಅಗಸಿಮನಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಎಮ್.ಎಮ್.ರಾಜಿಬಾಯಿ, ಜಿಲ್ಲಾಕಾರ್ಯಧ್ಯಕ್ಷ ಭೀಮಪ್ಪ ಬೋಕಡೆಕರ, ಸಂದೀಪ ಪಾಟೀ¯, ಮಲ್ಲಯ್ಯಾ ಹಿರೇಮಠ, ಕೋಶಾಧ್ಯಕ್ಷ ಬಾಬು ಮೂಲಿಮನಿ, ದುಂಡಯ್ಯಾ ಹಿರೇಮಠ, ಎಮ್.ಎನ್.ಹುಕ್ಕೇರಿ, ಎಮ್.ಕೆ.ಕಮ್ಮಾರ, ಎನ್.ಬಿ. ಬುದ್ನೂರ, ಅದೃಶಪ್ಪ ಗದ್ದಿಹಳ್ಳಿ ಶೆಟ್ಟಿ, ವೇದಿಕೆ ಮಹಿಳಾ ಅಧ್ಯಕ್ಷಣಿ ಸುಧಾ ಪೂಜಾರ, ಬಾಬು ಜಾಯಕ್ಕನವರ, ಭರತೇಶ ಜಾಯಕ್ಕನವರ, ಶಿವಲಿಂಗಯ್ಯಾ ಪತ್ರಿಮಠ, ಮಲ್ಲಿಕಾರ್ಜುನ ಕರವಿನಕೊಪ್ಪ, ಆಯ್.ಪಿ. ಭಾಗವಾನ ಇನ್ನುಳಿದವರು ಉಪಸ್ಥಿತರಿದ್ದರು.

loading...