ಚನ್ನಮ್ಮ ಕಿತ್ತೂರು ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಬಿ.ಎಸ್.ಯಡಿಯೂರಪ್ಪ

loading...

ಚನ್ನಮ್ಮ ಕಿತ್ತೂರು : ದೇಶವನ್ನು ಕಾಯುತ್ತಿರುವ ಸೈನಿಕರು ಉಗ್ರರ ದಾಳಿಗೆ ಬಲಿಯಾಗುತ್ತಿರುವದು ವಿಷಾದನೀಯವೆಂದ ಅವರು ಉಗ್ರಗಾಮಿಗಳ ಮತ್ತು ದೇಶದ್ರೋಹಿಗಳ ಉಪಟಳವನ್ನು ತಡೆಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡತ್ತಾಯಿದ್ದಾರೆ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇತ್ತೀಚೆಗೆ ತಾಲೂಕಿನ ಬೈಲೂರು ಗ್ರಾಮದ ಸಿಆರ್‍ಪಿಎಫ್ ಯೋಧ ಬಸಪ್ಪಾ ಹನುಮಂತ ಭಜಂತ್ರಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವೀರಮರಣ ಹೊಂದಿದ್ದ ಯೋಧನ ಮನೆಗೆ ಮಂಗಳವಾರ ಬೇಟಿ ನೀಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ ಅವರು ನೀಡಿದ ರೂ 25 ಸಾವಿರ ಚಕ್ ನ್ನು ಮೃತ ಯೋಧನ ಕುಟುಂಬಕ್ಕೆ  ಬಿಜಿಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿತರಿಸಿದರು.
ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುರೇಶ ಮಾರಿಹಾಳ, ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ್,  ರಾಜ್ಯ ಕಾರ್ಯಕಾರಿಣಿ ಸದಸ್ಯ ಹಣುಮಂತ ಕೊಟಬಾಗಿ, ಸೇರಿದಂತೆ ಇತರರು ಇದ್ದರು.

loading...