ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಿಂದ ನಾನೇ ಕಣಕ್ಕೆ: ಸಂಸದ ಪ್ರಕಾಶ ಹುಕ್ಕೇರಿ

0
81
loading...

ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಿಂದ ನಾನೇ ಕಣಕ್ಕೆ: ಸಂಸದ ಪ್ರಕಾಶ ಹುಕ್ಕೇರಿ
ಕನ್ನಡಮ್ಮ ಸುದ್ದಿ
ಚಿಕ್ಕೋಡಿ 11: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದಿಂದ ಎದುರಾಳಿಗಳು ಪ್ರಬಲ ಅಭ್ಯಥರ್ಿಗಳನ್ನು ನಿಲ್ಲಿಸಿದರೆ ನಾನೇ ಚುನಾವಣಾ ಅಖಾಡಕ್ಕೆ ಧುಮಕುವದಾಗಿ ಚಿಕ್ಕೋಡಿ ಲೋಕಸಭಾ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲೂಕಿನ ಕಾಡಾಪೂರ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಕಾಡಾಪೂರ ಕ್ರಾಸ್ನಿಂದ ನಣದಿ ಫ್ಯಾಕ್ಟರಿ ಕ್ರಾಸ್ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವದರಿಂದ ಜನ ನಮ್ಮನ್ನು ಗುರುತಿಸಿದ್ದಾರೆ. ಪ್ರತಿಪಕ್ಷದವರು ಇನ್ನೂ ಅಭ್ಯಥರ್ಿ ಹುಡುಕುವದರ ತಯಾರಿ ನಡೆಸಿದ್ದು, ನನಗೆ ಸರಿಸಾಟಿ ಎನಿಸುವ ಯಾರನ್ನೇ ನಿಲ್ಲಿಸಿದರೂ ಚಿಕ್ಕೋಡಿ ಸದಲಗಾ ಮತಕ್ಷೇತ್ರದಿಂದ ನಾನೇ ಸ್ಪಧರ್ಿಸುತ್ತೇನೆ. ಇಲ್ಲದಿದ್ದರೆ ಈಗಿನ ಶಾಸಕ ಗಣೇಶ ಹುಕ್ಕೇರಿ ಅವರೇ ಮುಂದಿನ ಚುನಾವಣೆಯನ್ನು ಎದುರಿಸಲಿದ್ದಾರೆ ಎಂದರು.
ಮುಂದುವರೆದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸುವ ಆಶಯ ಹೊಂದಿದ್ದು, ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಪ್ರಬಲ ಅಭ್ಯಥರ್ಿಗಳ್ಯಾರು ಅಖಾಡ ಪ್ರವೇಶಿಸದಿದ್ದಲ್ಲಿ ನಾನೂ ಸಹ ಬೇರೊಂದು ಕ್ಷೇತ್ರದಿಂದ ಸ್ಪಧರ್ಿಸಲು ಆಲೋಚನೆ ಮಾಡಿದ್ದೇನೆಂದರು.
ಸಂಕೇಶ್ವರ-ಬಿಜಾಪೂರ ರಸ್ತೆ ಬಗ್ಗೆ ತಪ್ಪು ಮಾಹಿತಿ:
ಬಹುನಿರೀಕ್ಷಿತ ಸಂಕೇಶ್ವರ-ಬಿಜಾಪೂರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವತರ್ಿಸಿ ಚತುಷ್ಪಥ ರಸ್ತೆ ನಿಮರ್ಾಣ ಮಾಡುವ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಹೆದ್ದಾರಿ ನಿಮರ್ಾಣಕ್ಕೆ ತಗಲುವ ವೆಚ್ಚಗಳ ಬಗ್ಗೆ ಎಸ್ಟಿಮೇಟ್ ಸಲ್ಲಿಸಲು ಇಲಾಖೆ ತಯಾರಿಸುತ್ತಿದೆ. ಆದರೆ ಕೆಲ ಬಿಜೆಪಿ ನಾಯಕರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.
ದ್ವಿವಿಭಜಕ ರಸ್ತೆ:
ಕಾಡಾಪೂರ ಗ್ರಾಮದಿಂದ ಕಾಡಾಪೂರ ಕ್ರಾಸ್ವರೆಗಿನ 2.5 ಕಿ.ಮೀ ರಸ್ತೆ ಅಗಲೀಕರಣ ಮಾಡುವ ಜೊತೆಗೆ ದ್ವಿವಿಭಜಕ ಅಳವಡಿಸಿ, ರಸ್ತೆ ಮಧ್ಯದಲ್ಲಿ ಆಕರ್ಷಕ ಬೀದಿ ದೀಪಗಳನ್ನು ಅಳವಡಿಸಲು ಪ್ರಸ್ತಾವಣೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಟಿಸಿ ಅಳವಡಿಕೆ:
ಗ್ರಾಮದಲ್ಲಿ ಕೃಷಿ ಪಂಪಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದಿರುವ ಬಗ್ಗೆ ರೈತರು ತಮ್ಮ ಅಳಲು ತೋಡಿಕೊಂಡಾಗ ಕೂಡಲೇ ಸ್ಪಂದಿಸಿದ ಸಂಸದ ಪ್ರಕಾಶ ಹುಕ್ಕೇರಿ ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಟ್ರಾನ್ಸಫಾರ್ಮರ ಮೇಲ್ದಜರ್ೆಗೇರಿಸುವಂತೆ ಸೂಚಿಸಿದರು.
ಸಮಾರಂಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರಖಾನೆ ನಿದರ್ೆಶಕ ಮಲ್ಲಿಕಾಜರ್ುನ ಪಾಟೀಲ, ವೀರೇಂದ್ರ ಪಾಟೀಲ, ಮಲ್ಲಪ್ಪಾ ಬಾಗಿ, ವಿಠ್ಠಲ ವಾಳಕಿ, ಧರಿಗೌಡ ಪಾಟೀಲ, ದುಂಡಪ್ಪಾ ಖಿನ್ನವರ, ಬಿ.ಡಿ. ಪಾಟೀಲ, ಸುರೇಶ ಬಾಡಕರ, ಸಿದ್ದರಾಮೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು

loading...