loading...

ಬೆಂಗಳೂರು:- ಹದಿಹರೆಯದ ಹೆಣ್ಣು ಮಕ್ಕಳಿಗೆ ಮತ್ತು ಅಂಗನವಾಡಿಯಿಂದ ಮೂರು ವರ್ಷದೊಳಗಿನ ಎಸ್ಸಿ-ಎಸ್ಟಿ ಮಕ್ಕಳಿಗೆ ತೆಲಂಗಾಣ ಮಾದರಿಯಲ್ಲಿ ಮೊಟ್ಟೆ ನೀಡಲು ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2017-18ನೇ ಸಾಲಿನ ಎಸ್ಸಿ-ಎಸ್ಟಿ, ಟಿಎಸ್‍ಪಿ ಉಪ ಯೋಜ ನೆಯ ಅನುದಾನದ ಬಳಕೆ ಕುರಿತು ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಅಂಗನವಾಡಿ ಮಕ್ಕಳಿಗೆ ತಿಂಗಳಿಗೆ 16 ಮೊಟ್ಟೆಗಳನ್ನು ಕೊಡಲಾಗುತ್ತಿದೆ. ಅಂಗನವಾಡಿಗೆ ಮಕ್ಕಳನ್ನು ಕಳುಹಿ ಸುವುದಿಲ್ಲ. ಅಂತಹವರನ್ನು ಗುರುತಿಸಿ ಅಂಗನವಾಡಿಯಿಂದ ಹೊರ ಉಳಿದಿರು ವವರಿಗೂ ಮೊಟ್ಟೆ ಕೊಡಬೇಕು ಎಂದರು.
ಹದಿಹರೆಯಕ್ಕೆ ಕಾಲಿಡುತ್ತಿರುವ ಹೆಣ್ಣು ಮಕ್ಕಳಿಗೂ ಈ ಯೋಜನೆ ವಿಸ್ತರಿಸಬೇಕು ಎಂದು ತಿಳಿಸಿದರು. ಉಪ ಯೋಜನೆಯ ಅನುದಾನ ಖರ್ಚು ಮಾಡಬೇಕಿರುವ ಸಮಾಜ ಕಲ್ಯಾಣ ಇಲಾಖೆ ಶೇ.100ರಷ್ಟು ಸಾಧನೆ ಮಾಡಿಲ್ಲ. ಎಲ್ಲ ಇಲಾಖೆಗಳಲ್ಲಿ ಶೇ.95ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ. ಎಲ್ಲ ಇಲಾಖೆಗಳ ಅನುದಾನದ ಖರ್ಚು ಉಸ್ತುವಾರಿ ನೋಡಿಕೊಳ್ಳಬೇಕಾದ ನೋಡೆಲ್ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಬೇರೆ ಇಲಾಖೆಗೆ ಹೇಳುವ ನೈತಿಕತೆ ಇರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

loading...