ಜೂಜಾಟ ಅಡ್ಡೆ ಮೇಲೆ ದಾಳಿ : 20 ಜನ ಬಂಧನ

0
14
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯ ಅಥಣಿ, ಹಾರೂಗೇರಿ, ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ದಂಧೆಯಲ್ಲಿ ತೊಡಗಿದ್ದ 20 ಜನರನ್ನು ಪೊಲೀಸ್‍ರು ಖಚಿತ ಮಾಹಿತಿ ಪಡೆದು ದಾಳಿಮಾಡಿ ಬಂಧಿಸಿದ್ದಾರೆ.
ಬಂಧಿತರು ಬಳವಾಡ ಗ್ರಾಮದ ಅಜೀತ ಸಹದೇವ ಐನಾಪುರ ಹಾಗೂ ಐದು ಜನರು, ಹಾರೂಗೇರಿಯ ಹಸನ ಸಿರಾಜ ಕಾಗವಾಡ ಹಾಗೂ ಏಳು ಜನರು ಮತ್ತು ಸವದತ್ತಿಯ ಪುಂಡಲೀಕ ಶಿವರಾಯಪ್ಪ ನಡುವಿನಹಳ್ಳಿ ಹಾಗೂ ಐದು ಜನರು ಬಂಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.
ಬಂಧಿತರಿಂದ 16,850 ರೂ. ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಅಥಣಿ, ಹಾರೂಗೇರಿ ಹಾಗೂ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...