ತೋಟಗಾರಿಕೆ ಇಲಾಖೆ ಸಸ್ಯ ಸಂತೆ ಆಯೋಜನೆಗೆ ಸಿದ್ಧತೆ

0
57
loading...

6 ದಿನ ವಿವಿಧ ಜಾತಿಯ ಸಸಿಗಳ ಮಾರಾಟ | ಸಸಿಗಳ ಕುರಿತು ಅಧಿಕಾರಿಗಳಿಂದ ಸೂಕ್ತ ಮಾಹಿತಿ
ಕೆ ಎಮ್ ಪಾಟೀಲ
|ಬೆಳಗಾವಿ: ಮನೆಯ ಮುಂದಿನ ಜಾಗೆಯಲ್ಲಿ ಕೆಲವರು ಅಂಕಾರಿಕ ಸಸಿಗಳು, ತರಕಾರಿ ಸಸಿಗಳು ಬೆಳೆಯಬೇಕು ಎಂಬ ಉದ್ದೇಶ ಇರುತ್ತದೆ ಆದರೆ, ತಮಗೆ ಕೈಗೆಟಕುವ ಸ್ಥಳದಲ್ಲಿ ಸಸಿಗಳು ದೊರೆಯುದಿಲ್ಲ ಎಂದು ತಿಳಿದು ಸುಮ್ಮನಿದ್ದು ಬಿಡುತ್ತಾರೆ. ಅಂತವರಿಗೆ ಸಸ್ಯ ಸಂತೆಯಲ್ಲಿ ಸರ್ಕಾರಿ ದರದಲ್ಲಿ ಸಸಿಗಳನ್ನು ನೀಡುವ ವ್ಯವಸ್ಥೆಯನ್ನು ತೋಟಗಾರಿಕೆ ಅಭಿಯಾನ ಹಾಗೂ ಸಸ್ಯ ಸಂತೆ ಅಭಿಯಾನದಡಿ 28 ರಿಂದ ಹಮ್ಮಿಕೊಳ್ಳಲಾಗಿದೆ.
ನಗರದ ಕ್ಲಬ್‍ರೋಡ್ ಹತ್ತಿರ ಇರುವ ಹ್ಯೂಮ್ ಪಾರ್ಕ್‍ನಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸಸ್ಯ ಸಂತೆಯನ್ನು ಪ್ರಾಂರಭಿಸಲಾಗುತ್ತಿದೆ. ಸಾರ್ವಜನಿಕರು ಈ ಸಂತೆಯ ಲಾಭ ಪಡೆದುಕೊಂಡು ಮನೆಗಳ ಮುಂದೆ ಸಸಿಗಳನ್ನು ನೆಡಲು ಇದು ಉತ್ತಮ ವೇದಿಕೆಯಾಗಿದೆ.
ಅಲಂಕಾರಿಕ ಗಿಡಗಳು, ಔಷಧಿ ಮತ್ತು ಸಾಂಬಾರು ಪದಾರ್ಥಕ್ಕೆ ಸಂಬಂಧಿಸಿದ ಸಸಿಗಳು, ವಿವಿಧ ಬಗೆಯ ಹಣ್ಣಿನ ಗಿಡಗಳಾದ ಮಾವು, ಪೆರಲ, ಚಿಕ್ಕು, ಕರಿಬೇವು, ಲಿಂಬೆ, ನೇರಳೆ, ತೆಂಗು ಸೇರಿದಂತೆ ಇತರ ಜಾತಿಯ ಸಸಿಗಳು ಲಭ್ಯ. ಉತ್ತಮ ಗುಣ ಮಟ್ಟದ ಜೇನು ತುಪ್ಪ, ಹಾಗೂ ಜೈವಿಕ ಕೇಂದ್ರದಲ್ಲಿ ತಯಾರಿಸಿದ ಸಾವಯವ ಗೊಬ್ಬರ ಅತಿ ಕಡಿಮೆ ದರದಲ್ಲಿ ದೊರೆಯುತ್ತದೆ.
ಜಿಲ್ಲೆಯಲ್ಲಿ ಒಟ್ಟು 28 ತೋಟಗಾರಿಕೆ ಕ್ಷೇತ್ರಗಳ ಪೈಕಿ ಮುಖ್ಯವಾಗಿ 9 ಕಡೆ ಸಸ್ಯಾಭಿವೃದ್ಧಿ ಪಡಿಸಿದ್ದು ಸುಮಾರು 4 ಲಕ್ಷ ಸಸ್ಯಗಳನ್ನು ರೈತ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಿತರಿಸಲು ಸಸ್ಯ ಸಂತೆಯನ್ನು 6 ದಿನಗಳು ಸಡೆಸಲಾಗುತ್ತಿದೆ.
ಇನ್ನು ಈ ಸಂತೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ದೊರೆತರೆ ಈ ಸಂತೆಯನ್ನು ಜಿಲ್ಲೆಯ ಎಲ್ಲ ತಾಲೂಕು ಮಟ್ಟ, ಹೊಬಳಿ ಮಟ್ಟದಲ್ಲಿ ಸ್ಥಳಿಯ ಸಂತೆಯಲ್ಲಿ ದೊರೆಯುವಂತೆ ಏರ್ಪಾಡು ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೇಯೆ ಸಂಚಾರಿ ವಾಹನದಲ್ಲಿ ಸಸಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆಯ ಇಲಾಖೆ ಅಧಿಕಾರಿ ಕಿರಣಕುಮಾರ ಉಪಳೆ ಕನ್ನಡಮ್ಮಗೆ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಇಂತಹ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಹಾಗಾಗಿ ಸಾರ್ವಜನಿಕರು ಸಸ್ಯ ಸಂತೆಯ ಉಪಯೋಗ ಪಡೆದುಕೊಂಡು ತಾವು ಯಾವ ಸಸಿಗಳನ್ನು ಬೆಳೆಸಬೇಕು ಎಂದು ಇಚ್ಚೆ ಇರುತ್ತದೆ ಅಂತಹ ಸಸಿಗಳನ್ನು ಖರೀದಿಸಲು ಮುಕ್ತ ಅವಕಾಶ ಇರುತ್ತದೆ.
ಬಾಕ್ಸ್
ಜಿಲ್ಲಾಯಲ್ಲಿ ಪ್ರಪ್ರಥಮ ಬಾರಿಗೆ ಸಸ್ಯ ಸಂತೆಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಗರ ಪ್ರದೇಶದ ಜನರು ತಮಗೆ ಬೇಕಾಗಾದ ಸಸ್ಯಗಳನ್ನು ಏಲ್ಲಿ ದೊರೆಯುತ್ತವೆ ಎಂಬ ಗೊಂದಲದಲ್ಲಿ ಇರುತ್ತಾರೆ ಅಂತವರಿಗೆ ತಮಗೆ ಕೈಗೆಟಕುವ ಸ್ಥಳದಲ್ಲಿ ಖರೀಧಿಸಲು ಅವರು ಅಂದಕೊಂಡ ಸಸಿಗಳನ್ನು ನೀಡಲು ಇಲಾಖೆಯಿಂದ ಮುಂದಾಗಿದ್ದೆವೆ. ಹಾಗೇಯೆ ಸಸಿಗಳಿಗೆ ನೀಡಲು ಸಾವಯವ ಗೊಬ್ಬರವನ್ನು ಕೆಜಿ ಲೆಕ್ಕದಲ್ಲಿ ಸಾರ್ವಜನಿಕರಿಗೆ -ನೀಡಲಾಗುತ್ತದೆ ಇದರ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳಬೇಕು.
-ಕಿರಣಕುಮಾರ ಉಪಳೆ. ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಬೆಳಗಾವಿ

loading...