ದಲಿತರ ಮೇಲೆ ಬಹಿಷ್ಕಾರ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ

0
20
loading...

ಕನ್ನಡಮ್ಮ ಸುದ್ದಿ-ವಿಜಯಪುರ
ಸಿಂದಗಿ ಓತಿಹಾಳ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಓತಿಹಾಳ ಗ್ರಾಮದಲ್ಲಿ ದಲಿತ ಬಾಂಧವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಗ್ರಾಮದ ಕೆಲವರು ಅವಕಾಶ ನೀಡದೇ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ದಲಿತ ಯುವಕರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ದಲಿತರ ಬಾಂಧವರಿಗೆ ಮನಸ್ಸಿಗೆ ನೋವುಂಟಾಗುವಂತೆ ನಡೆದುಕೊಂಡಿದ್ದಾರೆ. ದಲಿತ ಕುಟುಂಬಗಳಿಗೆ ಗ್ರಾಮದಲ್ಲಿ ಕೂಲಿ ಕೆಲಸ ನೀಡದೆ ಹಾಗೂ ಆಹಾರ ಧಾನ್ಯ ದೊರೆಯದಂತೆ ಮಾಡಿರುವುದು ಅಮಾನವೀಯವಾಗಿದೆ. ಇದರಿಂದಾಗಿ ಗ್ರಾಮದಲ್ಲಿ ದಲಿತರು ಜೀವನ ನಡೆಸುವದು ದುಸ್ತರವಾಗುತ್ತಿದೆ ಎಂದು ಆಗ್ರಹಿಸಿದರು.
ನ್ಯಾಯವಾದಿ ಹಾಗೂ ಸಂಘಟನೆ ಜಿಲ್ಲಾ ಸಂಚಾಲಕ ಸುನೀಲ ಉಕ್ಕಲಿ ಮಾತನಾಡಿ, ಸಿಂದಗಿ ಪೊಲೀಸ್ ಠಾಣೆಯಲ್ಲಿ ದಲಿತ ಕುಟುಂಬಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದರೂ ಸಹ ಯಾವುದ ಪ್ರಯೋಜನವಾಗಿರುವುದಿಲ್ಲ. ಸದ್ಯ ಹಾಕಿರುವ ಬಹಿಷ್ಕಾರವನ್ನು ಹಿಂತೆಗೆದುಕೊಂಡು ಮೊದಲಿನಂತೆ ದಲಿತರು ಗ್ರಾಮದಲ್ಲಿ ಜೀವನ ನಡೆಸುವಂತಾಗಬೇಕು. ಕೂಡಲೇ ದಲಿತರ ಮೇಲೆ ಹಲ್ಲೆ ನಡೆಸಲು ಕಾರಣವಾದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಶೋಕ ಕೊಂಡಗೂಳಿ, ಹುಚ್ಚಪ್ಪ ಪರಸಪ್ಪ ಗಡಿಗೆನ್ನವರ, ಭಾಸ್ಕರ ಭೀಮಪ್ಪ ಬೂದಿಹಾಳ, ಶಿವಪುತ್ರ ಶಂಕ್ರೆಪ್ಪ ಬೂದಿಹಾಳ, ಶ್ರೀಶೈಲ ಕಡಕೋಳ, ಭೀಮಪ್ಪ ವಠಾರ, ಗೋಪಾಲ ಜವಳಗಿ ಮುಂತಾದವರು ಉಪಸ್ಥಿತರಿದ್ದರು.

loading...