ದೇಶದಲ್ಲಿ ಬದಲಾವಣೆ ಗಾಳಿ‌ ಬೀಸುತ್ತಿದೆ: ಕೇಂದ್ರ ಸಚಿವ ರಾಥೋಡ್

0
59
loading...

ಕನ್ನಡಮ್ಮ ಸುದ್ದಿ
 ಬೆಳಗಾವಿ:12 ಪೂರ್ಣ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಗುಣಮಟ್ಟದ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ದೇಶದ ಪರಿಸ್ಥಿತಿ ಸಾಕಷ್ಟು ಬದಲಾಗಿ ಈಗ ಪ್ರತಿಯೊಂದರಲ್ಲಿ ಕಂಡುಬಂದಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಚಾರ ಸಚಿವ ಎವಿಎಸ್ ಎಂ. ರಾಜವರ್ಧನ ಸಿಂಗ್ ರಾಥೋರ ತಿಳಿಸಿದರು. ಪ್ರಾಚೀನ ಕಾಲದಿಂದ ಭಾರತ ಮಹತ್ತಿನ ದೇಶವಾಗಿತ್ತು. ಅದೇ ಸಾಮರ್ಥ್ಯ ಈಗಲೂ ಇದೆ. ಸಾಮರ್ಥ್ಯ ದ ಬಳಕೆಗೆ ಉತ್ತಮ ಆಡಳಿತ, ನಮ್ಮತನದ ಮನೋಭಾವನೆಯ ಆಡಳಿತ ಬೇಕಾಗುತ್ತದೆ. ದೇಶದ ಸಮಾಜ ಸ್ವಾಸ್ಥ್ಯ ತರಲು ಕೇಂದ್ರ ಪ್ರಯತ್ನಿಸುತ್ತಿದೆ. ನಂದು, ನಮ್ಮದು ಎಂಬ ಮನೋಭಾವನೆ ಪ್ರತಿ ಭಾರತೀಯ ನಾಗರಿಕನಲ್ಲಿ ಬರಬೇಕು. ಆಗ ಸ್ವಸ್ವಾಭಿಮಾನ ಹುಟ್ಟಿ ಸಹಾಯ ಸಹಕಾರಕ್ಕೆ ನಾಂದಿಯಾಗುತ್ತದೆ. ಮೋದಿ ಸರಕಾರದ ಅವಧಿಯಲ್ಲಿ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ನಡೆದಿದೆ. ಜನರ ಮನೋಭಾವನೆ ಅರಿತು ಆಡಳಿತ ನಡೆಸುವ ಯತ್ನ ಕೇಂದ್ರದ ಮೋದಿ ಸರಕಾರ ನಡೆಸಿದೆ. ಜನರ ಆಶೋತ್ತರಗಳ ಬಗ್ಗೆ ಕೇಂದ್ರಕ್ಕೆ ವರದಿ ಕೊಡಲಾಗುವುದು ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ ಕೇಂದ್ರ ಸರಕಾರ ರೈತರು, ಮಹಿಳೆಯರು, ಉದ್ಯಮಿಗಳು, ಸಣ್ಣ ಕೈಗಾರಿಕೆಗಳ ಪುನಶ್ಚೇತನ ಸೇರಿ ಹಲವು ಕಾರ್ಯಕ್ರಮಗಞಲನ್ನು ಜಾರಿಗೆ ತಂದಿದೆ ಎಂದರು. ಪ್ರಭಾಕರ ಕೋರೆ, ಡಾ. ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ, ಕಿರಣ ಜಾಧವ, ಎಂ. ಬಿ. ಝಿರಲಿ, ರಾಜೀವ ಟೋಪಣ್ಣವರ, ದೀಪಕ ಜಮಖಂಡಿ, ರಾಜು ಚಿಕ್ಕನಗೌಡ್ರ, ಶಿವಲಿಂಗ ಹೂಗಾರ ಇತರರು ಉಪಸ್ಥಿತರಿದ್ದರು.
loading...