ನಗರದ ಅಭಿವೃದ್ಧಿ ಪಟಿಸುತ್ತಿರುವ ಮೇಯರ್ ಸಿಎಂ ಭೇಟಿ

0
80
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:30 ಸದಾ ನಾಡ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಎಂಇಎಸ್, ರಾಜ್ಯ, ಭಾಷೆ, ಗಡಿ ಎಂದು ಕ್ಯಾತೆ ತೆಗೆಯುತ್ತಾ ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ತೆಲೆ ಕೆಡೆಸಿಕೊಳ್ಳದ ಎಂಇಎಸ್ ಸಂಘಟನೆ, ಶುಕ್ರವಾರ ಎಂಇಎಸ್ ನ ಬೆಳಗಾವಿ ಪಾಲಿಕೆ ಮೇಯರ್ ಸಂಜೊತಾ ಬಾಂದೇಕರ್ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದರು.
ಬೆಳಗಾವಿ ನಗರ ಅಭಿವೃದ್ಧಿಗಾಗಿ ಹೆಚ್ಚು ವರಿ ೧೫೦ಕೋಟಿ ಹಣ ಬಿಡುಗಡೆ ಮಾಡುವಂತ್ತೆ ಮನವಿ ಸಲ್ಲಿಸಿದರು. ಇನ್ನು ಬೆಳಗಾವಿಯ ನಾಲೆಗಳ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಗಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತ್ತೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 150 ಕೋಟಿ‌ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೇಯರ್ ಸಂಜೋತ ಬಾಂದೇಕರ ಹೇಳಿದರು.

loading...