ನಾಳೆ ಕನಾ೯ಟಕ ಬಂದ್.. ಬಂದ್.. ಬಂದ್ ಎಲ್ಲಾ ಬಂದ್

0
349
loading...


ಕನ್ನಡಮ್ಮ ಸುದ್ದಿ
ಬೆಳಗಾವಿ: 11 ಮಹದಾಯಿ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಟಾನ‌ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ (ಜೂನ್. 12 )ರಂದು ಕನ್ನಡ ಸಂಘಟನೆಗಳು, ರೈತ ಸಂಘ, ಸಾರಿಗೆ‌ ಸಂಸ್ಥೆ ‌ನೌಕರರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿವೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ಅತ್ಯಂತ ಕನಿಷ್ಠವಾಗಿ‌ ನೋಡುತ್ತಿರುವುದು, ಸತತ ಬರದಿಂದ ತತ್ತರಿಸಿದ ರೈತಾಪಿ ವರ್ಗದ ಸಾಲ ಮನ್ನಾ ಮಾಡದಿರುವುದರಿಂದ ಸಾಲ ತೀರಿಸಲು ಸಾದ್ಯವಾಗದೆ ರೈತರು ದಿಕ್ಕುತೋಚದೆ ಆತ್ಮಹತ್ಯೆಯಂತಹ ಕಠಿಣ ‌ನಿರ್ದಾರ ಕೈಗೊಳ್ಳಲುತ್ತಿದ್ದರೂ ಮಾತ್ರ ಈ ಎರಡೂ ಸರ್ಕಾರಗಳು ಒಬ್ಬರಮೆಲೊಬ್ಬರು ಹಾಕುತ್ತಾ ರೈತರನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿವೆ. ಅಲ್ಲದೇ ಮಧ್ಯಪ್ರದೇಶ ದಲ್ಲಿ ಪ್ರತಿಭಟನಾ ‌ನಿರತ ರೈತರ ಮೆಲೆ ಗೊಲಿಬಾರ ಮಾಡಿ ಸುಮಾರು ಆರು ಜನ ರೈತರನ್ನು ಹತ್ಯೆ ಮಾಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯವನ್ನು ಖಂಡಿಸಿ ರೈತರು ಬಂದ ಮಾಡಲು ಮುಂದಾಗಿದ್ದಾರೆ.
ಇನ್ನೊಂದು ಕಡೆ ಬೆಳಗಾವಿಯಲ್ಲಿ ಪದೇ ಪದೇ ಗಡಿ, ಭಾಷೆ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನಾಡದ್ರೋಹದ‌ ಕೆಲಸ ಮಾಡುತ್ತಿರುವ ಎಂಇಎಸ್ ಮುಖಂಡರನ್ನು ಗಡಿಪಾರು ಹಾಗು ಎಂಇಎಸ್ ನ್ನು ನಿಷೇಧ ಮಾಡುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆಕೊಟ್ಟಿವೆ.
ಈ ಬಂದನಿಂದ ಸಾರಿಗೆ ಸಮಸ್ಯೆ, ಆಸ್ಪತ್ರೆ, ಹೊಟೆಲ್, ‌ಔಷಧ ಅಂಗಡಿ ಸೇರಿದಂತೆ ಇನ್ನುಳಿದ ಸಾರ್ವಜನಿಕ ಸೇವೆಗಳಲ್ಲಿ ಸಮಸ್ಯೆ ಉಂಟಾಗಲಿವೆ, ಆದರೆ ಶಾಲಾ‌, ಕಾಲೇಜು ರಜೆ ಘೋಷಣೆಯ ಬಗ್ಗೆ ಸರ್ಕಾರ ‌ಇನ್ನುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

loading...