ನೋಡುಗರ ಮೈ ನವಿರೇಳಿಸಿದ ಬೈಕ್ ಸಾಹಸ

0
140
loading...

 

ಕನ್ನಡಮ್ಮ ಸುದ್ದಿ
ಗೋಕಾಕ15: ರೇಸಿಂಗ್ ಬೈಕುಗಳ ಬ್ರಾಂಡ್‍ಗಳಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ ಗೋಕಾಕದಲ್ಲಿ ಇಂದು ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು.
ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‍ಗಳನ್ನು ಪ್ರದರ್ಶಿಸಿದರು. ಪಟ್ಟಣದ ವರ್ಕರ್ಸ್ ಕಾಲನಿಯ ಬಳಿಯಿರುವ ಎಪಿಎಂಸಿ ಒಂದನೇ ಮುಖ್ಯರಸ್ತೆಯಲ್ಲಿ ಈ ಸಾಹಸ ಪ್ರದರ್ಶನ ನಡೆಯಿತು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂ ಡ್ಯೂಕ್ ಬೈಕ್‍ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‍ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷರಾದ ಅಮಿತ್ ನಂದಿ “ಕೆಟಿಎಂ ಬ್ರಾಂಡ್ ಅಧಿಕ ಸಾಮಥ್ರ್ಯದ ರೇಸಿಂಗ್ ಬೈಕ್‍ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್‍ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದು, ಗೋಕಾಕದಲ್ಲಿ ಇಂದು ಆಯೋಜಿಸಲಾಗಿತ್ತು” ಎಂದು ತಿಳಿಸಿದರು.
ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಪ್ರದರ್ಶನದಲ್ಲಿ ಬಳಸಿದ ಕೆಟಿಎಂ ಬೈಕ್‍ಗಳು ಪಟ್ಟಣದ ಗಂಗಾ ಕಾಂಪ್ಲೆಕ್ಸ್‍ನಲ್ಲಿರುವ ಕೆಟಿಎಂ ಮಳಿಗೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದಕ್ಕೆ ಮೊದಲು ಶಿರಸಿ, ದಾವಣಗೆರೆ, ಕಂಚಿಪುರ, ಕೊಯಮತ್ತೂರು, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

loading...