ಪರಿಸರ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ

0
55
loading...

ಗೋಕಾಕ: ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯಯಾಗಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸುರೇಶ ಮೋೈಲಿ ಹೇಳಿದರು.

ಅವರು ಗುರುವಾರದಂದು ತಾಲೂಕಿನ ರಾಜಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗೋಕಾಕ, ಜ್ಞಾನ ವಿಕಾಸ ಮಹಿಳಾ ಯೋಜನೆಯಡಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದ್ದು ಸಸಿಯ ಬೀಜದ ಉಂಡಿಯನ್ನು ಮಹಿಳೆಯರು ನಿರ್ಮಾಣ ಮಾಡಿ ಗಿಡವಾಗಿ ಬೆಳೆಸುವಂತಹ ಕಾರ್ಯ ಮಾಡಬೇಕು. ಮನುಷ್ಯ ಇಂದಿನ ಒತ್ತಡದ ಜೀವನದಲ್ಲಿ ಐಷಾರಾಮಿ ಬದುಕನ್ನು ನಿರ್ಮಿಸಿಕೊಳ್ಳಲು ಪರಿಸರವನ್ನು ಹಾಳು ಮಾಡುತ್ತಿರುವುದು ಖೇಧಕರ ಸಂಗತಿಯಾಗಿದೆ. ಈ ದಿಸೆಯಲ್ಲಿ ಇಂದಿನ ಮಹಿಳೆಯರು ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ಪರಿಸರವನ್ನು ಉಳಿಸುವಂತ ಮತ್ತು ಸಂರಕ್ಷಣೆ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ಯೋಜನಾಧಿಕಾರಿ ದೇವರಾಜ, ಶಾಲೆಯ ಪ್ರಧಾನಗುರು ಎಲ್.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.ಐ.ಕೊಳವಿ, ಹಿರಿಯರಾದ ಬಸವಂತ ಕಮತಿ, ವಲಯ ಮೇಲ್ವಿಚಾರಕ ಮಹಾದೇವ ಸ್ವಾಗತಿಸಿದರು. ಮಹಿಳಾ ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ವಿಜಯಾಗೌಡ ನಿರೂಪಿಸಿದರು.

loading...