ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ: ಲೆಫ್ಟನಂಟ್ ಮಹೇಶ

0
43
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಗಿಡಮರಗಳನ್ನು ಪೋಷಿಸಿ ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಕಾಪಾಡಬೇಕಾಗಿದೆ ಎಂದು ಲಿಂಗರಾಜ ಮಹಾವಿದ್ಯಾಲಯದ ಎನ್‍ಸಿಸಿ ಅಧಿಕಾರಿಗಳಾದ ಲೆಫ್ಟನಂಟ್ ಡಾ. ಮಹೇಶ ಗುರನಗೌಡ ಹೇಳಿದರು.
ಕಾಲೇಜಿನ ಎನ್‍ಸಿಸಿ ಘಟಕದ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನಡೆವುದರ ಮೂಲಕ ಮಾತನಾಡಿದರು.
ವಿಶ್ವಪರಿಸರ ದಿನ ಒಂದು ದಿನಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಅದು ಅನು ದಿನವು ಮುನ್ನಡೆವ ಕ್ರಿಯೆಯಾಗಬೇಕು. ನಮ್ಮ ಕ್ರೌರ್ಯಕ್ಕೆ ಈಗಾಗಲೇ ಸಾಕಷ್ಟು ಪರಿಸರವನ್ನು ನಾಶ ಮಾಡಿದ್ದೇವೆ. ಅದನ್ನು ಪುನರ್ ಸೃಷ್ಟಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದು. ನಮ್ಮ ಭೂಮಿ ನಮ್ಮಕೈಯಲ್ಲಿ ಇದೆ. ಅದನ್ನು ಭವಿಷ್ಯತ್ತಿಗೆ ಕೊಡುವ ಸಂಕಲ್ಪ ನಮ್ಮದಾಗಬೇಕು. ತಂತ್ರಜ್ಞಾನ ಬಲದಿಂದ ಪ್ರಕೃತಿಯ ಹಸಿರುಮನೆ ಕಣ್ಮರೆಯಾಗುತ್ತಿದೆ. ಈ ಪ್ರಕೃತಿ ವಿಕೋಪಗಳಿಗೆ ನಮ್ಮ ಅಸಮತೋಲನ ಬದುಕೇ ಕಾರಣ. ಈ ಕುರಿತು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಕಾಳಜಿಯನ್ನು ಜನಸಾಮಾನ್ಯರಲ್ಲಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ನೂಡಲ್ ಅಧಿಕಾರಿಗಳಾದ ಪ್ರೊ. ಎಸ್.ಎನ್. ಮೂಲಿಮನಿ, ಗ್ರಂಥಪಾಲಕ ಅರವಿಂದ ಸಂಜಯ್ ಹಂಜಿ, ಪ್ರೊ. ಹನುಮಂತ ಮೇಲಿನಮನಿ, ಪ್ರೊ. ರವೀಂದ್ರ ಬಡಿಗೇರ ಹಾಗೂ ಎನ್‍ಸಿಸಿ ಕೆಡೆಟ್‍ಗಳು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಎನ್‍ಸಿಸಿ ಕೆಡೆಟ್ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನುಂಟು ಮಾಡಿದರು.

loading...