ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ದತ್ತು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವ ಭರವಸೆ

0
27
 • ಕನ್ನಡಮ್ಮ ಸುದ್ದಿ-ವಿಜಯಪುರ
  ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿರುವ ಪ್ರತಿಯೊಂದು ಶಾಲೆಗಳನ್ನು ಅಭಿವೃದ್ಧಿ ದೃಷ್ಟಿಯಿಂದ ದತ್ತು ಸ್ವೀಕರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
  ಕಾನ್ವೆಂಟ್ ಶಾಲೆ ತೊರೆದು ವಿಜಯಪುರ ತಾಲೂಕಿನ ಹಣಮಸಾಗರದ ಸರ್ಕಾರಿ ಶಾಲೆಗೆ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ನಂತರ ಮಾತನಾಡಿದ ಅವರು, ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿರುವ ಪ್ರತಿಯೊಂದು ಶಾಲೆಗಳನ್ನು ಅಭಿವೃದ್ಧಿ ದೃಷ್ಟಿಯಿಂದ ದತ್ತು ತಗೆದುಕೊಂಡು ಅವುಗಳನ್ನು ಅಭಿವೃದ್ದಿಗೊಳಿಸಲಾಗುವುದು. ಪ್ರಥಮ ಹಂತವಾಗಿ 100 ಶಾಲೆಗಳನ್ನು ಆಯ್ಕೆ ಮಾಡಿ ಅಲ್ಲಿ ಸ್ಮಾರ್ಟ್‍ಕ್ಲಾಸ್ ವ್ಯವಸ್ಥೆ ರೂಪಿಸಿ ಆಧುನಿಕ ತಂತ್ರಜ್ಞಾನ ಬಳಸಿ ಬೋಧನೆ ಮಾಡುವ ವ್ಯವಸ್ಥೆ ಜಾರಿಗೊಳಿಸುತ್ತೇನೆ ಎಂದು ಹೇಳಿದರು.
  ಖಾಸಗಿ ಶಾಲೆಗಳಲ್ಲಿ ದೊರೆಯುತ್ತಿರುವ ಸಕಲ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು. ಆಗ ಮಾತ್ರ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಅಂತರವನ್ನು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಮಕ್ಕಳಿಗಾಗಿ ಬಿಸಿಯೂಟದ ಜೊತೆಗೆ ಪೌಷ್ಠಿಕ ಆಹಾರ ಹಾಲು, ಷೂಗಳನ್ನು ನೀಡುತ್ತಿದೆ. ಷೂ-ಭಾಗ್ಯ ಸಣ್ಣದು ಎಂದು ಅನೇಕರು ಹೇಳುತ್ತಾರೆ, ವಿಜಯಪುರದಂತಹ ಪ್ರದೇಶದಲ್ಲಿ ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ಪ್ರಖರತೆ 42 ರಿಂದ 43 ಡಿಗ್ರಿ ಸೆಲ್ಸಿಯಸ್‍ವರೆಗೂ ತಲುಪಿರುತ್ತದೆ. ಇಂತಹ ಸಂದರ್ಭದಲ್ಲಿ ಬರಿಗಾಲಲ್ಲಿ ಅಡ್ಡಾಡುವುದು ಸಾಧ್ಯವೇ ಇಲ್ಲ. ಈಗ ವಿದ್ಯಾರ್ಥಿಗಳಿಗೂ ಷೂ ನೀಡಿರುವುದರಿಂದ ಯಾವುದೇ ತೊಂದರೆ ಇಲ್ಲ. ಷೂ-ಭಾಗ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ತಿಳಿಸಿದರು.
  ಯುವ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಶ್ರೀದೇವಿ ಉತ್ಲಾಸರ, ಗ್ರಾಮೀಣ ವಲಯ ಬಿಇಓ ಬೆಳ್ಳೆಣ್ಣವರ, ಹಣುಮಸಾಗರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಲಕ್ಷ್ಮೀ ಹೊಸಮನಿ, ಹಣುಮಸಾಗರ ಗ್ರಾಮ ಪಂಚಾಯತ ಸದಸ್ಯರು, ಹಣುಮಸಾಗರ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
  *****

  loading...

  ಶಾಸಕರ ಅನುದಾನವನ್ನು ಮಂದಿರಗಳಿಗೆ ನೀಡುವ ಬದಲು ವಿದ್ಯಾ ಮಂದಿರಗಳಿಗೆ ನೀಡಿದರೆ ಹೆಚ್ಚು ಅರ್ಥಪೂರ್ಣಗುತ್ತದೆ. ಗ್ರಾಮಸ್ಥರು ಸಹ ತಮ್ಮ ಗ್ರಾಮದ ದೇವಾಲಯಗಳಿಗೆ ಅನುದಾನ ಕೇಳುವ ಬದಲು ತಮ್ಮ ಶಾಲೆಗೆ ಅನುದಾನ ಕೋರಿದರೆ ಹೆಚ್ಚು ಸೂಕ್ತ, ಇದರಿಂದಾಗಿ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

loading...