ಬಾಂಗ್ಲಾದೇಶದ ರಾಯಭಾರಿಗಳು ವಿಜಯಪುರಕ್ಕೆ ಭೇಟಿ

0
50

ಕನ್ನಡಮ್ಮ ಸುದ್ದಿ-ವಿಜಯಪುರ

ಕಳೆದ ವರ್ಷ ಅಕ್ಟೋಬರ್ 17 ರಂದು ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿ ಸಿಕ್ಕಿದ್ದ 32 ಬಾಂಗ್ಲಾ ಪ್ರಜೆಗಳ ವಿಚಾರಣೆಗೆ ಬಾಂಗ್ಲಾದೇಶದ ರಾಯಭಾರಿಗಳು ಶನಿವಾರ ವಿಜಯಪುರ ಜಿಲ್ಲೆಯ ದರ್ಗಾ ಜೈಲಿಗೆ ಭೇಟಿ ನೀಡಿದರು.

loading...

ವಿಜಯಪುರದ ನಗರದಲ್ಲಿ  ಬಾಂಗ್ಲಾ ವಲಸಿಗರು ನೆಲಸಿದರು. ಅಕ್ರಮವಾಗಿ ಬಾಂಗ್ಲಾ ವಲಸಿಗರು ನಗರದಲ್ಲಿ ಸಿಕ್ಕಿದರು. ಈ ಪ್ರಕರಣದ ಸಂಬಂಧ  ವಿಚಾರಣೆಗೆ ಮತ್ತು ಪರಿಶೀಲನೆಗೆ ವಿಜಯಪುರಕ್ಕೆ ಬಾಂಗ್ಲಾ ರಾಯಭಾರಿಯಾದ ಮುಷರಫ ಹುಸೇನ (ಕೌನ್ಸಲರ್) ಮತ್ತು ರವಿ ಶರ್ಮಾ (ಸಹಾಯಕ ಕೌನ್ಸಲರ್) ರಾಯಭಾರಿಗಳು ಆಗಮಿಸಸಿದರು. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರದ ಐತಿಹಾಸಿಕ ದರ್ಗಾ ಜೈಲಿಗೆ ಭೇಟಿ ನೀಡಿ ಜೈಲರ್ ಮಲ್ಲಕಾರ್ಜುನಸ್ವಾಮಿ ಅವರಿಂದ ಮಾಹಿತಿ ಪಡೆದರು.

ನಂತರ ಐತಿಹಾಸಿಕ ಗೋಲ್ ಗುಂಬಜ್ ನ್ನು ಬಾಂಗ್ಲಾ ರಾಯಭಾರಿ ಮುಷರಫ ಹುಸೇನ ವೀಕ್ಷಣೆ ಮಾಡಿ ಸಂತೋಷ ವ್ಯಕ್ತಪಡಿಸಿದರು.

loading...