loading...

ಬೆಂಗಳೂರು: ನ್ಯಾಯಾಂಗ ವಶದಲ್ಲಿದ್ದ ರೌಡಿ ಬಾಂಬ್‍ನಾಗನನ್ನು ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಲಿನಲ್ಲಿದ್ದ ನಾಗನನ್ನು ಬಾಡಿ ವಾರಂಟ್ ಮೂಲಕ ಕೋರ್ಟ್‍ಗೆ ಹಾಜರುಪಡಿಸಿದ್ದ ಕೆಂಗೇರಿ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರ ಮನವಿ ಮನ್ನಿಸಿದ 56ನೇ ಎಸಿಎಂಎಂ ಕೋರ್ಟ್‍ರೌಡಿ ನಾಗನನ್ನು ಕೆಂಗೇರಿ ಪೊಲೀಸರ ವಶಕ್ಕೆ ನೀಡಿದೆ. ಕಳೆದ ವಾರ ಹೆಣ್ಣೂರು ಪೊಲೀಸರು ವಿಚಾರಣೆ ನಡೆಸಿದ್ದರು. ಆ ನಂತರ ಕೋರ್ಟ್‍ನಾಗನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮುನಿರಾಜು, ಕಲ್ಯಾಣ್, ಚಂದ್ರಕುಮಾರ್ ಎಂಬುವರು ನಾಗನ ವಿರುದ್ಧ ದೂರು ನೀಡಿದ್ದರು.

loading...