ಬಿಎಸ್ ವೈ ಮೇಲೆ ವೇಣುಗೋಪಾಲ ವಾಗ್ದಾಳಿ

0
77
  • ಕನ್ನಡಮ್ಮ ಸುದ್ದಿ
    ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯಾ ರೈತರ ಪರ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಎಸ್ ವಾಯ್ ಅವರಿಗೆ ನೀಜವಾಗಿ ರೈತರ ಬಗ್ಗೆ ಕಾಳಜಿವಿದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಲು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ವೇಣುಗೋಪಾಲ ಅವರು ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.
    ಅವರು ಅಥಣಿ ಪಟ್ಟಣದಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ಸಾಲ ಮನ್ನಾ ಮಾಡಬೇಕು ಎಂದು ಹೋರಾಟ ನಡಿಸಿದ್ದಾರೆ. ಕೇಂದ್ರ ಸಚಿವ ನಾಯ್ಡು ಸಾಲ ಮನ್ನಾ ಎನ್ನುವುದು ಫ್ಯಾಶನ್ ಆಗಿದೆ ಎನ್ನುತ್ತಾರೆ. ಹಣಕಾಸು ಸಚಿವರು ಸಾಲಮನ್ನಾ ಮಾಡಲು ಸಾದ್ಯವಿಲ್ಲ ಎನ್ನುವ ಮೂಲಕ ಬಿಜೆಪಿ ದಂದ್ವನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರು.
    ಯಡಿಯೂರಪ್ಪ ದಲಿತರ ಮನೆ ಭೇಟಿ ಉಪಹಾರ ಇದೊಂದು ರಾಜಕೀಯವಾಗಿದೆ. ಅಧಿಕಾರದ ಅವಧಿಯಲ್ಲಿ ಯಡಿಯೂರಪ್ಪ ದಲಿತರ ಮನೆಗೆ ಹೋಗಿಲ್ಲ. ಚುನಾವಣೆ ಹತ್ತು ತಿಂಗಳ ಬಾಕಿ ಇರುವಾಗ ದಲಿತರ ಮನೆ ಉಪಹಾರ ಎನ್ನುವುದು ಒಂದು ಚುನಾವಣಾ ಗೀಮಿಕವಾಗಿದೆ ಎಂದು ವಾಗ್ದಾಳಿ ನಡೆಸಿದರು.
loading...