ಬಿಜೆಪಿಗೆ ಯತ್ನಾಳ ಅಗತ್ಯವಿಲ್ಲ: ಸಂಸದ ಜೋಶಿ

0
334
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:9 ರಾಜ್ಯದಲ್ಲಿ ಬಿಜೆಪಿ ಪಕ್ಷ ಸದೃಡವಾಗಿದೆ. ಬಿಜೆಪಿ ಪಕ್ಷಕ್ಕೆ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಅಗತ್ಯವಿಲ್ಲ ಎಂದು‌ ಹುಬ್ಬಳ್ಳಿ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಇಂದಿಲ್ಲಿ ಹೇಳಿದರು.
ಅವರು ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಈಗಾಗಲೇ ಬಿಜೆಪಿ ಯತ್ನಾಳ ಅಗತ್ಯವಿಲ್ಲವೆಂದು ವಿಜಯಪುರ ಜಿಲ್ಲಾ ಮತ್ತು ರಾಜ್ಯ ಕೋರ ಕಮೀಟಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಹ್ಲಾದ ಜ್ಯೋಷಿ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಮನೆ ಮನೆಗೆ ಕಾರ್ಯಕ್ರಮ ಮಾಡಿದರೂ ಪ್ರಯೋಜನವಿಲ್ಲ. ಜನರು ಅವರನ್ನ ಮನೆಗೆ ಕಳಿಸುವುದು ನಿಶ್ಚಿತ.
ಜೆಡಿಎಸ ಪಕ್ಷಕ್ಕೆ ಯಾವುದೇ ಸ್ಪಷ್ಟ ನಿಲುವು ಇಲ್ಲ.ಉತ್ತರ ಕರ್ನಾಟಕ ಹೆಚ್ಚಿನ ಅನ್ಯಾಯ ಮಾಡಿದ್ದು ಜೆಡಿಎಸ. ರಾಜ್ಯದಲ್ಲಿ ಜೆಡಿಎಸ ಪಕ್ಷಕ್ಕೆ ನೆಲೆಯಿಲ್ಲ ಎಂದರು.ಜೆಡಿಎಸ ಅಪ್ಪಾ, ಮಗಾ, ಮೊಮ್ನಕ್ಕಳ ಪಕ್ಷವಾಗಿದೆ ಎಂದು ಜ್ಯೋಷಿ ಲೇವಡಿ ಮಾಡಿದರು.

loading...