ಮಾನವೀಯತೆಯನ್ನು ಹುಟ್ಟುಹಾಕಲು ಕಲೆ ಅವಶ್ಯ: ಸಿದ್ಧರಾಮ ಶ್ರೀಗಳು

0
71
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:25 ಮನಷ್ಯನಲ್ಲಿ ಮಾನವೀಯತೆಯನ್ನು ಹುಟ್ಟು ಹಾಕಿ ಬೆಳೆಸುವ ಶಕ್ತಿ ಸಂಗೀತ, ನೃತ್ಯ ಮುಂತಾದ ಕಲೆಗಳಿಗೆ ಇವೆ. ಈ ಸಾಂಸ್ಕøತಿಕತೆಯನ್ನು ಮೆಚ್ಚುವ ಒಪ್ಪುವ ಮನಸುಗಳು ಮಾನವೀಯತೆ ಹೊಂದಿ ಮನುಷ್ಯನಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ ಎಂದು ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಪಾಶ್ಚಾಪುರದ ಶಾಂತಲಾ ನಾಟ್ಯಸುಧಾ ಕಲಾನಿಕೇತನ (ರಿ) ವತಿಯಿಂದ ಆಯೋಜಿಸಲಾದ ಗೆಜ್ಜೆನಾದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಸಭೆಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಜನ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಹಣದಿಂದ ಭೌತಿಕ ಸಿರಿತನ ಕಾಣಬಹುದೇ ಹೊರತು ಮಾನಸಿಕ ನೆಮ್ಮದಿ ಹಾಗೂ ಸುಖ ನಿದ್ದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆಧ್ಯಾತ್ಮ ಹಾಗೂ ಕಲೆ, ಸಂಸ್ಕøತಿಗಳನ್ನು ಉಳಿಸಿ ಬೆಳೆಸುವುದರಿಂದ ಮನುಷ್ಯ ಸಿರಿವಂತನಾಗಿ ಬದುಕಲು ಸಾಧ್ಯ ಎಂದು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಅದನ್ನು ಒಲಿಸಿಕೊಳ್ಳಲು ನಿರಂತರ ಶ್ರಮ ಹಾಗೂ ಸತತ ಪರಿಶ್ರಮ ಅಗತ್ಯ. ಪಾಶ್ಚಾಪುರದ ಪ್ರತಿಷ್ಠಿತ ಉದೋಶಿ ಮನೆತನದ ಕುಡಿ ಶಾಂತಲಾ ಭರತನಾಟ್ಯದಲ್ಲಿ ಪರಿಣತಿ ಪಡೆದಿದ್ದು, ಹಳ್ಳಿಮಕ್ಕಳಿಗೆ ಈ ನೃತ್ಯ ಕಲಿಸುವ ಮೂಲಕ ಗಡಿಭಾಗದಲ್ಲಿ ನಮ್ಮ ಸಂಸ್ಕøತಿಯನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಂಗೀತಕ್ಕೆ ಪಂಚಮವೇದ ಎಂದು ಕರೆದಿರುವ ನಮ್ಮ ಹಿರಿಯರು, ಭರತನಾಟ್ಯದಲ್ಲಿ ನಟರಾಜನ್ನು ಕಂಡಿದ್ದಾರೆ. ಈ ನೃತ್ಯಕಲೆಯಿಂದ ಮಹಿಳೆಯರು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಣ್ಣ ವಿಜಾಪುರ ಅವರು ಪ್ರಾಸ್ತಾವಿಕ ನುಡಿದರು. ಪಿಕೆಪಿಎಸ್ ಅಧ್ಯಕ್ಷರಾದ ಬಸವರಾಜ ಎಂ ಅಂಬಿಗೇರ ಅವರು ನಿರ್ವಹಿಸಿದರು. ಸಂಗೀತ ಕಲಾವಿದರಾದ ನೈನಾ ಗಿರಿಗೌಡರ್ ಹಾಗೂ ಮಂಗಲಾ ಮಠದ ಅವರು ಮುಖ್ಯ ಅತಿಥಿಯಾಗಿದ್ದರು. ಯಮಕನಮರಡಿಯ ಶಿಕ್ಷಕರಾದ ಸಿಎಂ ದರಬಾರೆ ಅವರು ನಿರೂಪಿಸಿದರು.

loading...