ಮಾಮೂಲಿ ನೀಡದಿದ್ದರೇ ಫೈಲ್ ಮುಂದೆ ಹೋಗಲ್ಲಾ

0
163
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ:23 ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಇರುವ ಸಬ್ ರಜಿಸ್ಟಾರ ಕಚೇರಿಯಲ್ಲಿ ಪ್ರತಿವೊಂದು ಕಾಯ೯ಕ್ಕೆ ಮಾಮೂಲು ಇಲ್ಲದೆ ಯಾವುದೆ ಕಾಯ೯ ನಡೆಯುವದಿಲ್ಲ.ಅಲ್ಲಿನ ಸಿಬ್ಬಂದಿ ಸಾವ೯ಜನಿಕರಿಂದ ಹಣ ವಸೂಲಿ ಮಾಡುವ ವಿಡಿಯೋ ಲಭ್ಯವಾಗಿದೆ.ಕಂಪ್ಯೂಟರ ಸಿಬ್ಬಂದಿ ಭೀಮಶಿ ವಗ್ಗಾರ ಎಂಬುವವರು ಅಲ್ಲಿನ ಅಧಿಕಾರಿಗಳಿಗೆ ಮಾಮುಲು ವಸೂಲಿ ಮಾಡಿ ಕೊಡುತ್ತಾರೆ.ಹಣ ವಸೂಲಿ ಮಾಡುತ್ತಿರುವ ಅಲ್ಲಿನ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.ಹಣ ಏಕೆ ನೀಡಬೇಕೆಂದು ಜನರು ಪ್ರಶ್ನಿಸಿದರೆ ನಮ್ಮ ಸಾಹೇಬ್ರಗೆ ಮಾಮುಲು ನೀಡಬೇಕು ಎಂದು ಕಂಪ್ಯೂಟರ ಆಪರೇಟರ ಭೀಮಸಿ ವಗ್ಗರ ಹೇಳುತ್ತಾರೆ.ಇನ್ನು ಇಲ್ಲಿ ಸರಕಾರ ನಿಗದಿ ಮಾಡಿದಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಾರೆ ಹಣ ನೀಡಿದರೆ ಮಾತ್ರ ಇಲ್ಲಿ ಕೆಲಸಗಳಾಗುತ್ತವೆ‌.ಇನ್ನು ಈ ಕುರಿತು ಹಣ ಪಡೆಯುವ ವಿಡಿಯೋ ಲಭ್ಯವಾಗಿದೆ.

loading...