ಮೊದಲೇ ಬಾರಿಗೆ ರೆಡ್ಡಿ ಸಮುದಾಯದ ವಿದ್ಯಾರ್ಥಿನಿಲಯ ಬೆಳಗಾವಿಯಲ್ಲಿ ನಿರ್ಮಾಣ: ರಾಮಣ್ಣ

0
168
loading...

ಕನ್ನಡಮ ಸುದ್ದಿ
ಬೆಳಗಾವಿ:16ಇದೇ ದಿ. 18 ರಂದು ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಸಮೀಪ ರೆಡ್ಡಿ ಭವನ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದ ಅಡಿಗಲ್ಲು ಸಮಾರಂಭ ಜರುಗಲಿದೆ ಎಂದು ರಾಮಣ್ಣ ಮೆಳ್ಳೂರ ಇಂದಿಲ್ಲಿ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ‌ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರೆಡ್ಡಿ ಸಮಾಜದ ಬಡ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ವಸತಿ ನಿಲಯವನ್ನು ಕಟ್ಟಲಾಗುತ್ತಿದೆ ಇದರ ಸದುಪಯೋಗವನ್ನು ರೆಡ್ಡಿ ಸಮುದಾಯದ ಬಡ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಡಿಗಲ್ಲು ಸಮಾರಂಭದ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೆರವೆರಿಸಲಿದ್ದಾರೆ. ಭೂಮಿ‌ ಪೂಜೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ನೆರವೆರಿಸಲಿದ್ದಾರೆ. ದಾನಿಗಳಿಗೆ ಸನ್ಮಾನವನ್ನು ವಿಧಾನ ಸಭೆಯ ಉಪ ಸಭಾಪತಿ ಶಿವಶಂಕರ ರೆಡ್ಡಿ ಮಾಡಲಿದ್ದಾರೆ. ಫಲಕ ಅನಾವರಣವನ್ನು ಸಚಿವ ರುದ್ರಪ್ಪ ಲಮಾಣಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಹಿಸಲಿದ್ದಾರೆ‌. ಸಾನಿದ್ಯವನ್ನು ರೆಡ್ಡಿ ಗುರುಪೀಠದ ವೇಮನಾನಂದ ಶ್ರಿಗಳು ವಹಿಸಲಿದ್ದಾರೆ ಎಂದರು.
ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯರಾದ ಕುಪೇಂದ್ರ ರೆಡ್ಡಿ, ಕೆ.ಸಿ. ರಾಮಮೂರ್ತಿ, ಡಾ.ಪ್ರಭಾಕರ ಕೋರೆ, ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಮ್ಮರಡ್ಡಿ ಮಳಲಿ, ಎ.ಸಿ.ಪಾಟೀಲ, ನಾರಾಯಣ ಕೆಂಚರಡ್ಡಿ, ಮಂಜುನಾಥ ಪಾಟೀಲ, ಹನುಮಂತ ಹಂಚಿ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...