ಯುಪಿಎಸ್ ಸಿ ಪರೀಕ್ಷೆ ಕಬ್ಬಿನದ ಕಡಲೆಯಲ್ಲ: ನಂದಿನಿ

0
775
loading...

ಕನ್ನಡಮ ಸುದ್ದಿ
ಬೆಳಗಾವಿ ; ಮಾಜಿ ರಾಷ್ಟ್ರಪತಿ ಡಾ. ಕಲಾಂ ಅವರು ಹೇಳಿದ ಹಾಗೇ ಕನಸುಗಳನ್ನು ಕಾಣಿ ಅವು ನನಸಾಗುವುದರ ತನಕ ಬಿಡಬಾರದು ಅಂದಾಗ ಮಾತ್ರ ನಾವು ಹಿಡಿದ ಗುರಿ ತಲುಪಲು ಸಾದ್ಯ ಎಂದು ಐಎಎಸ್ ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೋಲಾರದ ನಂದನಿ ಕೆ.ಆರ್. ಹೇಳಿದರು.
ಅವರು ಬುಧವಾರ ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾಡಳಿತದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಗಳಿಸಿದ ಜಾಣ ಜಾಣೆಯರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುಪಿಎಸ್ ಸಿ ಪರೀಕ್ಷೆ ಎನ್ನುವುದು ಕೆಲವರಿಗೆ ಕಬ್ಬಿಣದ ಕಡಲೆ ಎಂದು ಕಾಣಿಸಬಹುದು ಆದರೆ ಅದು ಸಿಹಿಯಾದ ತರಹ ಮೇಲೆ ಗಟ್ಟಿಯಾಗಿರುತ್ತದೆ ಒಳಗಡೆ ಮೃದು ಸಿಹಿ ದೊರೆಯುತ್ತದೆ ಯುಪಿಎಸ್ ಸಿ ಫಲಿತಾಂಶ ಕೈಯಲ್ಲಿ ಹಿಡಿಯಬಹುದು ಎಂದರು.
ವೃತ್ತಿಯನ್ನು ಪ್ರೀತಿ ಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಿ, ನಾವು ಪ್ರೀತಿಯಿಂದ ಆಯ್ಕೆ ಮಾಡಿಕೊಂಡ ಕೆಲಸ ನಮ್ಮ ಕೈ ಹಿಡಿಯುತ್ತದೆ. ಕೈಲಾಗದು ಎಂದು ಕೈಕಟ್ಟಿ ಕುಳಿತು ಕೊಂಡರೆ ಯಾವುದು ಸಾದ್ಯವಿಲ್ಲ. ಕೈ ಕೆಸರಾದರೆ ಬಾಯಿ ಮೊಸರು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗದುಗಿನ ಡಾ.ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು, ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಶ್ರೀಗಳು, ಸಂಸದರಾದ ಡಾ.ಪ್ರಭಾಕರ ಕೋರೆ, ಸುರೇಶ ಅಂಗಡಿ, ಡಿಸಿ ಎನ್.ಜಯರಾಮ್, ಸಿಇಓ ರಾಮಚಂದ್ರನ್.ಆರ್. ಎಸ್. ಪಿ‌. ರವಿಕಾಂತೇಗೌಡಾ, ಡಾ.ಸುರೇಶ ಇಟ್ನಾಳ, ಶಶಿಧರ ಕುರೇರ ಸೇರಿದಂತೆ ಯುಪಿಎಸಪಿ ಹಾಗೂ ಕೆಪಿಎಸಸಿ ಪರೀಕ್ಷೆಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ‌ ಅಭ್ಯರ್ಥಿಗಳು ಉಪಸ್ಥಿತರಿದ್ದರು.

loading...