ಯುವರಾಜನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

0
74
loading...

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು 47ನೇ ಜನ್ಮ ದಿನದ ಸಂಭ್ರಮ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಾಂಗ್ರೆಸ್ ಯುವರಾಜನಿಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಅವರು ಆರೋಗ್ಯದಿಂದ ದೀರ್ಘಾವಧಿಕಾಲ ಇರಲಿ ಎಂದು ಹಾರೈಸಿ ಮೋದಿ ಟ್ವಿಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಸಹ ರಾಹುಲ್ಗೆ ಶುಭ ಕೋರಿದ್ದಾರೆ. ಸದ್ಯ ಅಜ್ಜಿ ಭೇಟಿಗಾಗಿ ರಾಹುಲ್ ಇಟಲಿಗೆ ತೆರಳಿದ್ದು ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಭಾರತದಲ್ಲಿ ಕೇಕ್ ಕತ್ತರಿಸಿ ರಾಹುಲ್ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ.

loading...