ಯೋಗ ಕೋರ್ಸ್ ಪ್ರಾರಂಭಿಸಲು ಶುಲ್ಕದಲ್ಲಿ ರಿಯಾಯಿತಿ: ಕುಲಪತಿ ಪೆÇ್ರ.ಶಿವಾನಂದ

0
39
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯಡಿಯಲ್ಲಿ ವಿವಿಧ ಮಹಾವಿದ್ಯಾಲಯಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳು ಯೋಗ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಸುಗಳನ್ನು ಪ್ರಾರಂಭಿಸಲು ಕೋರ್ಸುಗಳಿಗೆ ಠೇವಣಿ ಇಲ್ಲದೆ ಹಾಗೂ ಸಂಯೊಜನಾ ಶುಲ್ಕದಲ್ಲಿ ರಿಯಾಯಿತಿಯೊಂದಿಗೆ ಪ್ರಾರಂಭಿಸಲು ಸವಲತ್ತು ನೀಡಲಾಗುವುದು ಎಂದು ಆರ್‍ಸಿಯು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಶಿವಾನಂದ ಹೊಸಮನಿ ಹೇಳಿದರು.

ಮಂಗಳವಾರ ಅಂತರಾಷ್ಟ್ರೀಯ ಯೋಗ ಸ್ಕೂಲ್ ಆ¥sóï ಎಜುಕೇಶನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಯೋಗ ದಿನ ಉದ್ಘಾಟಸಿ ಮಾತನಾಡಿದ ಅವರು, ಕೋರ್ಸುಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ತರಬೇತಿ ಹೊಂದಿದ ಬೋಧಕರು ಮತ್ತು ವಿಶ್ವವಿದ್ಯಾಲಯಗಳ ನಿಯಮಾವಳಿಗಳಿಗೆ ಅನುಸಾರವಾಗಿ ಕೋರ್ಸುಗಳನ್ನು ಪ್ರಾರಂಭಿಸಲು ಅನುಮತಿಯನ್ನು ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷಕ್ಕೆ ನೀಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಯೋಗ ಕೋರ್ಸುಗಳನ್ನು ಪ್ರಾರಂಭಿಸಲು ವಿವಿಧ ಮಹಾವಿದ್ಯಾಲಗಳು ಹಾಗೂ ಶಿಕ್ಷಣ ಸಂಸ್ಥೆಗಳು ಇದರ ಸದುಪಯೋಗವನ್ನು ಪಡೆದುಕೊಂಡು ಯೋಗವನ್ನು ಅಭ್ಯಸಿಸಲು ಹಾಗೂ ಉತ್ತೇಜನ ನೀಡಲು ವಿಶ್ವವಿದ್ಯಾಲಯವು ಮುಂದೆ ಬರಬೇಕು. 200 ದೇಶಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹಾಗೂ ಇತರ ಸಂಘ ಸಂಸ್ಥೆಗಳ ಮೂಲಕ ಆಚರಿಸಲಾಗುತ್ತಿದೆ. ಯೋಗವು ಪುರಾತನ ಕಾಲದಿಂದ ಇಲ್ಲಿಯವರೆಗೂ ಬೃಹದಾಕಾರವಾಗಿ ಬೆಳೆದು ಬಂದಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಇಂದಿರಾ ಜೋಷಿ ಮಾತನಾಡಿ, ಯೋಗಾಸನ ಎಂದರೆ ಕೇವಲ ಆಸನಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ದೇಹ, ಮನಸ್ಸು ಮತ್ತು ಶಾಂತಿ ಸರಿ ಸಮಾನವಾಗಿ ಸೇರಿದಲ್ಲಿ ಮಾತ್ರ ಯೋಗದ ಮೂಲಕ ಯೋಗಿಯಾಗಲು ಸಾಧ್ಯವಾಗುತ್ತದೆ. ಯೋಗ ಕೇವಲ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗಿರದೇ ದಿನನಿತ್ಯದ ಚಟುವಟಿಕೆಗಳ ಒಂದು ಭಾಗವಾಗಿದ್ದಲ್ಲಿ ಮಾತ್ರ ಯೋಗದ ಸಾರ್ಥಕತೆಯನ್ನು ಪ್ರತಿಯೊಬ್ಬರು ಪಡೆಯಬಹುದಾಗಿರುತ್ತದೆ ಎಂದು ತಿಳಿಸಿದರು.

ಆಶಿಷ, ಸರ¥sóÀ, ಸ್ವರೂಪ ಹಾಗೂ ಸಂಜನಾ ಅವರು ವೃಕ್ಷಾಸನ, ಕೃಷ್ಣಾಸನ, ಊಷ್ಟ್ರಾಸನ, ಏಕಪಾದಾಸನ, ಬಕಾಸನ, ಓಂಕಾರಾಸನ, ಚಕ್ರಾಸನ, ಗರ್ಭಪಿಂಡಾಸನ, ಭೂಮಾಸನ, ಪದ್ಮ ಬಕಾಸನ, ಪದ್ಮ ಮಯೂರಾಸನ, ಪೂರ್ಣ ಮಚ್ಚೆಂದ್ರಾಸನ ಹಾಗೂ ಇತರ ಆಸನಗಳನ್ನು ಪ್ರದರ್ಶಿಸಿದರು.

ಪೆÇ್ರ.ಸಿದ್ದು ಪಿ. ಅಲಗೂರ, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ, ಡಾ.ಐ.ಎಸ್.ಕುಂಬಾರ, ಎ.ಸಿ.ಪಿ.ಆರ್, ಎನ್.ಎಸ್.ಎಸ್ ವಿದ್ಯಾರ್ಥಿಗಳು, ಸ್ನಾತಕೋತ್ತರ, ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಡಾ.ಎಂ.ಸಿ.ಎರ್ರಿಸ್ವಾಮಿ ನಿರೂಪಿಸಿದರು. ಆನಂದ ಬಡಿಗೇರ ಪ್ರಾರ್ಥಿಸಿದರು, ಡಾ.ಪೂರ್ಣಿಮಾ ಪಟ್ಟಣಶೆಟ್ಟಿ ಸ್ವಾಗತಿಸಿದರು, ಡಾ.ಎಸ್.ಓ.ಹಲಸಗಿ ವಂದಿಸಿದರು.

loading...