ಯೋಗ ಮಾಡಿ ರೋಗ ದೂರವಿಡಿ

0
37
loading...

ಯೋಗಾಭ್ಯಾಸದ ಮೂಲಕ ಶರೀರ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇಂದಿನ ಯುಗದಲ್ಲಿ ಯೋಗಾಭ್ಯಾಸಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಸಿಗುತ್ತಿದೆ. ಆದರೆ ಈ ಕ್ರಾಂತಿಕಾರಿ ಅಭ್ಯಾಸವನ್ನು ಅನುಸರಿಸಲು ನಮಗೆ ಅಡ್ಡಿಯಾಗಿರುವುದೆಂದರೆ ಒಂದೇ ಒಂದು-ಅದೇ ನಮ್ಮ ಸೋಮಾರಿತನ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಕೆಲವು ಯೋಗಾಸನಗಳನ್ನು ಅನುಸರಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಈ ಅಭ್ಯಾಸವನ್ನು ನಮ್ಮಲ್ಲಿ ಎಷ್ಟು ಜನರು ಅನುಸರಿಸುತ್ತಾರೆ.
ನಮ್ಮ ನಡುವೆ ಹಲವಾರು ಯೋಗಪಟುಗಳಿದ್ದರೂ ಬೆಳಿಗ್ಗೆದ್ದ ತಕ್ಷಣ ಅನುಸರಿಸುವವರು ಕಡಿಮೆ ಎಂದೇ ಹೇಳಬೇಕು. ಕೆಲವರಂತೂ ಗಾಳಿ ಬಂದಾಗ ತೂರಿಕೋ ಎಂಬಂತೆ ಯೋಗಾಭ್ಯಾಸದ ಅಲೆ ಚರ್ಚಿತವಾಗುತ್ತಿದ್ದಾಗ ಹುಮ್ಮಸ್ಸಿನಿಂದ ಭಾಗವಹಿಸಿ ಚರ್ಚೆ ತಣ್ಣಗಾದ ತಕ್ಷಣ ತಾವು ಯೋಗಭ್ಯಾಸ ಮಾಡದೇ ತಣ್ಣಗಾಗಿಬಿಡುತ್ತಾರೆ. ಆದರೆ ಯೋಗಾಭ್ಯಾಸವೆಂದರೆ ಒಂದು ನಿರ್ದಿಷ್ಟ ಅವಧಿಗೆ ಮೀಸಲಾದುದಲ್ಲ, ಬದಲಿಗೆ ಉಸಿರಿನಂತೆಯೇ ಇಡಿಯ ಜೀವಮಾನ, ನಿತ್ಯವೂ, ರಜೆಯೇ ಇಲ್ಲದಂತೆ ಅನುಸರಿಸಬೇಕಾದ ಕ್ರಮವಾಗಿದೆ.

loading...