ರಾಜ್ಯದಲ್ಲಿ ರೈತರಿಗಾಗಿ ರೈತ ಸಾರಥಿ ಯೋಜನೆಯ ಭಾಗ್ಯ

0
85
loading...

38 ಸಾವಿರ ರೈತರಿಗೆ ತರಬೇತಿ | ಟ್ರಾಫಿಕ್ ನಿಯಮಗಳ ಕುರಿತು ಮಾಹಿತಿ
|ಕೆ ಎಮ್. ಪಾಟೀಲ
ಬೆಳಗಾವಿ: ರಾಜ್ಯದಲ್ಲಿ ಟ್ಯ್ರಾಕ್ಟರ್ ಪರವಾನಗಿ ಪತ್ರ ಇಲ್ಲದೇ ವಾಹನವನ್ನು ಚಲಾವಣೆ ಮಾಡುತ್ತಿದ್ದಾರೆ ಅಂತವರು ಯಾವುದೇ ರಸ್ತೆ ನಿಯಮಗಳು ಕುರಿತು ಮಾಹಿತಿ ಇರುವುದಿಲ್ಲ ಅಂತಹ ಸಮಯದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ರೈತರು ಸಾವನ್ನಪ್ಪುತಿದ್ದಾರೆ. ಹಾಗಾಗಿ ಟ್ರಾಫಿಕ್ ನಿಯಮಗಳ ಕುರಿತು ಮಾಹಿತಿ ನೀಡುವ ಸಲುವಾಗಿ ರಾಜ್ಯ ಸರ್ಕಾರ ರೈತರ ಸಾರಥಿ ಎಂಬ ವಿನೂತ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಗೆ 2 ಕೋಟಿ ಅನುದಾನ ಬಿಡುಗಡೆಗಿಳಿಸಿದ್ದು, ಬೆಂಗಳೂರು ನಗರ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಯ ಆಯಾ ಸಾರಿಗೆ ಇಲಾಖೆ ಕಚೇರಿಯಲ್ಲಿ ಪ್ರತಿ ತಿಂಗಳಿಗೆ 76 ಒಟ್ಟು 10 ತಿಂಗಳಲ್ಲಿ 760, ರಾಜ್ಯದಲ್ಲಿ ಒಟ್ಟು 50 ಸಾರಿಗೆ ಕಚೇರಿಯಲ್ಲಿ 38 ಸಾವಿರ ರೈತರಿಗೆ ಅರ್ಜಿ ಸಲ್ಲಿಸಿದ ಕೃಷಿ ರೈತರಿಗೆ ತರಬೇತಿಯನ್ನು ನೀಡಲಾಗುತ್ತದೆ.
ರಾಜ್ಯದಲ್ಲಿ 4. 98, 921 ಕೃಷಿ ಬಳಕೆಯ ಟ್ರ್ಯಾಕ್ಟರ್ ನೋದಣಿಯಾಗಿವೆ ಆದರೆ, ಇದಲ್ಲಿ ಕೇವಲ 1. 86 ಲಕ್ಷ ಮಾತ್ರ ರೈತರು ಟ್ರ್ಯಾಕ್ಟರ್ ಓಡಿಸುವ ಪರವಾನಗಿ ಪತ್ರವನ್ನು ಹೊಂದಿದ್ದಾರೆ. ಇನ್ನುಳಿದ ರೈತರು ಹೊಂದಲಿ ಎಂಬ ಕಾರಣದಿಂದ ಈ ಯೋಜನೆಯನ್ನು ಸಾರಿಗೆ ಇಲಾಖೆಯಿಂದ ಜಾರಿಗೆ ತರಲಾಗಿದೆ. ಹಾಗಾಗಿ ಒಬ್ಬ ಫಲಾನುಭವಿಗೆ ಕಲಿಕಾ ತರಬೇತಿ ನೀಡಲು 150 ರೂ. ಡಿಎಲ್ ಕಲಿಕಾ ಟ್ರಾಫಿಕ್ ಕುರಿತು ನಿಯಮಗಳಿಗೆ 350 ರೂ ಹಣವನ್ನು ರೈತರಿಗೆ ತರಬೇತಿ ನೀಡುವ ವಾಹನ ಚಾಲನಾ ತರಬೇತಿ ಸಂಸ್ಥೆಗೆ ನೀಡುತ್ತಾರೆ.
ರೈತ ತಾನು ಬೆಳೆದ ದವಸ ದಾನ್ಯಗಳನ್ನು ಮಾರಾಟ ಮಾಡಲು ಅನ್ಯ ಊರಿಗೆ, ರಾಜ್ಯಕ್ಕೆ ತೆರಳುತ್ತಿರುತ್ತಾನೆ. ಆ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದರೆ. ಪರವಾನಗಿ ಪತ್ರವನ್ನು ಹೊಂದಿದ್ದರೆ ಅವನಿಗೆ ಎಲ್ಲರೀತಿಯ ವಿಮಾಗಳು ಬರುತ್ತವೆ. ಇಲ್ಲದೇ ಹೋದರೆ ಯಾವುದೇ ವಿಮಾಗಳು ಲಾಗು ಆಗುವುದಿಲ್ಲ ಅಂತಹುಗಳ ಲಾಭಗಳನ್ನು ಪಡೆಯಲಿ ಎಂಬ ಉದ್ದೇಶ ಹಾಗೂ ರಸ್ತೆ ಟ್ರಾಫಿಕ್ ನಿಯಮಗಳನ್ನು ಅರಿತುಕೊಳ್ಳಲಿ ಕಾರಣದಿಂದ ಈ ಯೋಜನೆ ರಾಜ್ಯದ ಎಲ್ಲ ಸಾರಿಗೆ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಅಪರ ಸಾರಿಗೆ ಆಯುಕ್ತರು ನಾರಾಯಣಸ್ವಾಮಿ ಕನ್ನಡಮ್ಮಗೆ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಕೇವಲ ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ನೀಡದೇ ರೈತರಿಗೆ ನಿಯಮಗಳ ಜೊತೆಯಲ್ಲಿ ಪರವಾನಗಿ ಪತ್ರವನ್ನು ವಿತರಿಸಬೇಕು ಅಂದಾಗ ಈ ಯೋಜನೆಗೆ ಒಂದು ಬೆಲೆ ಬರುತ್ತದೆ ಎಂಬುದು ರೈತ ಮುಖಂಡರ ಅಭಿಪ್ರಾಯವಾಗಿದೆ.
ಬಾಕ್ಸ್
ರಸ್ತೆ ಕಾಯ್ದೆ 3ರ ಪ್ರಕಾರವಾಗಿ ಯಾವುದೇ ವಾಹನ ಓಡಿಸುವ ವ್ಯಕ್ತಿ ಪರವಾನಗಿ ಪತ್ರವನ್ನು ಹೊಂದದೆ ವಾಹನವನ್ನು ಓಡಿಸುವಂತಿಲ್ಲ ಹಾಗೇನಾದರು ಓಡಿಸಿದರೆ ಅಂತವರ ಮೇಲೆ ಕಾನೂನು ಕ್ರಮವನ್ನು ಸಾರಿಗೆ ಇಲಾಖೆ ಮೂಲಕ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ ಈ ಯೋಜನೆಯಲ್ಲಿ ರೈತರು ರಸ್ತೆ ನಿಯಮಗಳು ಅರಿತು ಟ್ರ್ಯಾಕ್ಟರ್‍ನ್ನು ಯಾವ ರೀತಿಯಾಗಿ ಓಡಿಸಬೇಕು. ಧವಸಧಾನ್ಯಗಳನ್ನು ಯಾವ ರೀತಿಯಾಗಿ ಲಿಫ್ಟ ಮಾಡಬೇಕು ಎಂಬ ಮಾಹಿತಿಗಳನ್ನು ತರಬೇತಿಯಲ್ಲಿ ನೀಡಲಾಗುತ್ತದೆ.
-ಸಿ ಪಿ. ನಾರಾಯಣಸ್ವಾಮಿ.
ಅಪರ ಸಾರಿಗೆ ಆಯುಕ್ತರು ಪ್ರವರ್ಥನ ದಕ್ಷಿಣ ಬೆಂಗಳೂರು
ಬಾಕ್ಸ್
ಅರ್ಜಿ ಸಲ್ಲಿಸುವುದು ಹೇಗೆ
ಹತ್ತಿರದ ಆರ್‍ಟಿಒ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ರೈತ ಹೊಲದ ಉತಾರದ ಜೊತೆಗೆ ತಮ್ಮ ಮೂಲ ದಾಖಲಾತಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಬೇಕು. ಒಂದು ವೇಳೆ ರೈತನು ತನಗೆ ಬೇಡ ನನ್ನ ವಾಹನದ ಚಾಲಕನಾಗಿ ಕೆಲಸಮಾಡುತ್ತಿರುವ ವ್ಯಕ್ತಿಗೆ ನೀಡಿ ಎಂದರೆ. ಒಂದು ಪತ್ರವನ್ನು ಸಾರಿಗೆ ಆಯುಕ್ತರಿಗೆ ಬರೆದು ಕೊಟ್ಟರೆ ಅವರಿಗೂ ವಾಹನದ ಚಾಲನಾ ನಿಯಮಗಳನ್ನು ನೀಡಲಾಗುತ್ತದೆ. ಅಲ್ಲದೇ ಆಯ್ಕೆಗೊಂಡ ರೈತರು ಪ್ರಾದೇಶಿಕ ಅಧಿಕಾರಿ ತಿಳಿಸಿದ ಚಾಲನ ಕಲಿಕಾ ಸಂಸ್ಥೆ ಎಲ್ಲಿ ತರಬೇತಿ ನೀಡುತ್ತದೆ ಎಂದು ತಿಳಿದು ರೈತರಿಗೆ ತಿಳಿಸಲಾಗುತ್ತದೆ.  ಇನ್ನು ಪರವಾನಗಿ ಪತ್ರವನ್ನು ಸ್ವತಃ ರೈತರೆ 900 ರೂ ನೀಡಿ ಪಡೆದುಕೊಳ್ಳಬೇಕು ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.

loading...