ರಾಜ್ಯ ಸರ್ಕಾರದ ವೈದ್ಯಕೀಯ ತಿದ್ದುಪಡಿ ವಿರೋಧಿಸಿ- ಐಡಿಅ ಕೈಗೆ ಕಪ್ಪು ಬಟ್ಟೆ ಧರಿಸಿ ಮತಪ್ರದರ್ಶನ

0
32

ಕನ್ನಡಮ್ಮ ಸುದ್ದಿ-ವಿಜಯಪುರ
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಾ ತಿದ್ದುಪಡಿ ಮಸೂದೆ 2017ನ್ನು ಜಾರಿಗೊಳಿಸದಂತೆ ಆಗ್ರಹಿಸಿ ಖಾಸಗಿ ವೈದ್ಯರು ಕರೆ ನೀಡಿದ್ದ ಬಂದ್‍ಗೆ ವಿಜಯಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ತುರ್ತು ಚಿಕಿತ್ಸಾ ಸೇವಾ ಮಾತ್ರ ಲಭ್ಯವಿತ್ತು.
ಹೋರಾಟವನ್ನು ಬೆಂಬಲಿಸಿ ಒಂದು ದಿನ ಸೇವೆಯಿಂದ ದೂರ ಉಳಿದ ದಂತ ವೈದ್ಯರು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೈಗೆ ಕಪ್ಪು ಬಟ್ಟೆ ಧರಿಸಿ ಮತಪ್ರದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಡಾ. ರಶ್ಮಿ ಭೃಂಗಿಮಠ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಾ ತಿದ್ದುಪಡಿ ಮಸೂದೆ 2017 ಅತ್ಯಂತ ಅವೈಜ್ಞಾನಿಕವಾಗಿದೆ, ಈ ಕಾಯ್ದೆಯಲ್ಲಿರುವ ಅಂಶಗಳು ವೈದ್ಯಕೀಯ ಸಂಸ್ಥೆಗಳಿಗೆ ಭಾರತ ಸಂವಿದಾನವು ನೀಡಿದ ವೃತ್ತಿಯ ಹಕ್ಕಿಗೆ ಧಕ್ಕೆ ತರುವಂತಹದ್ದಾಗಿವೆ ಎಂದರು.
ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ನಮ್ಮ ವೈದ್ಯಕೀಯ ಸಂಸ್ಥೆಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸುತ್ತಿರುವ ಈ ಮಸೂದೆಯ ಅಡಿ ವೈದ್ಯರ ಸೇವಾ ದರಗಳನ್ನು ನಿಗದೀಪಡಿಸುವ ಅಧಿಕಾರ ಸರ್ಕಾರದದ ಕೆಲ ವೈದ್ಯಕೀಯ ಕ್ಷೇತ್ರದ ಅನುಭವ ಇಲ್ಲದವರಿಗೆ ನೀಡಲಾಗುತ್ತದೆ ಇದರಿಂದಾಗಿ ವೈದ್ಯಕೀಯ ಸಂಸ್ಥೆಗಳ ಹಿತಾಸಕ್ತಿಗೆ ಧಕ್ಕೆ ಯಾಗಲಿದೆ ಎಂದು ಹೇಳಿದರು.
ಡಾ. ಸಮೀರ ಚೌಧರಿ ಮಾತನಾಡಿ, ಪ್ರತಿಯೊಬ್ಬ ಉದ್ಯಮಿ ತಾನು ಉತ್ಪಾದಿಸುವ ವಸ್ತುಗಳಿಗೆ ಬೆಲೆ ನಿಗದಿ ಮಾಡುವಲ್ಲಿ ಸ್ವಾತಂತ್ರ್ಯ ಹೊಂದಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಈ ರೀತಿಯ ಕಾಯ್ದೆ ರೂಪಿಸುವುದು ಸರಿಯಾದ ಕ್ರಮವಲ್ಲ. ಈ ಕಾಯ್ದೆ ಅನುಷ್ಠಾನದಿಂದಾಗಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭಾರೀ ನಷ್ಟ ಉಂಟಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಡಾ. ಸತೀಶ ಶಹಾಪೂರ, ಡಾ. ರೇಖಾ ಪಾಟೀಲ ಮಾತನಾಡಿದರು. ಡಾ. ನಿವೇದಿತಾ ಕುಲಕರ್ಣಿ, ಡಾ. ಸವಿತಾ ಕಲ್ಲೂರ, ಡಾ.ರವಿ ಕಲ್ಲೂರ, ಡಾ. ಶೀವಲೀಲಾ ದೇವರಮನಿ,ಡಾ. ವಿಜಯಾಂಬಿಕ ಚೌಧರಿ, ಡಾ. ಹೇಮಾ ಪಾಟೀಲ, ಡಾ. ಶ್ರೀದೇವಿ ಶೀಲವಂತರ, ಡಾ. ವೈ. ಜಂಬಗಿ, ಡಾ.ಬೌರಮ್ಮ, ಡಾ.ಮೊಹ್ಮದ ನಜೀರ, ಡಾ. ನೂಲ, ಡಾ. ಸಲೀಮ ಮುಜಾವರ, ಡಾ. ಹರ್ಷ ಕುಲಕರ್ಣಿ, ಡಾ. ಕಿರಣ, ಡಾ. ಪರಮಾನಂದ, ಡಾ.ಸಲಬಾ, ಡಾ. ಶಕೀನ, ಡಾ. ದೀಪ ವಾರದ, ಡಾ.ವಾರದ, ಎ.ಎ. ಶಿರೂರು, ಡಾ. ಹೇಮಾ ಮಾನಕರ, ಡಾ. ಶ್ರೀದೇವಿ, ಡಾ.ರೂಪಾ ಶಹಪೂರ, ಡಾ. ಸುರಬಜೀತ ಕೌರ, ಡಾ. ಆನಂದ ಪಾಟೀಲ ಉಪಸ್ಥಿತರಿದ್ದರು.

****
ಭಾರತೀಯ ಸಂವಿಧಾನದಲ್ಲಿ ರೈಟ್ ಟು ಪ್ರೊಫೆಶನ್ ಹಕ್ಕು ನೀಡಲಾಗಿದೆ. ಈ ಕಾಯ್ದೆ ಜಾರಿಗೊಳಿಸಿದತೆ ಈ ಹಕ್ಕು ಕಸಿದುಕೊಂಡಂತಾಗುತ್ತದೆ.
-ಡಾ. ಡಾ. ರಶ್ಮಿ ಭೃಂಗಿಮಠ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷೆ

loading...