ರಾಷ್ಟ್ರದ ಶ್ರೀಮಂತ ಜಿಲ್ಲೆಯಲ್ಲಿ-ವಿಜಯಪುರ ಮುಂದಿನ 5 ವರ್ಷಗಳಲ್ಲಿ ಸ್ಥಾನ

0
44

ಕನ್ನಡಮ್ಮ ಸುದ್ದಿ-ವಿಜಯಪುರ
ರಾಷ್ಟ್ರದ 10 ಶ್ರೀಮಂತ ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ ಮುಂದಿನ 5 ವರ್ಷಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಮುಳವಾಡ ಏತ ನೀರಾವರ ಯೋಜನೆ ಬಬಲೇಶ್ವರ ಶಾಖಾ ಕಾಲುವೆಗೆ ಬಬಲೇಶ್ವರ ಗ್ರಾಮದ ಹತ್ತಿರ 13 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 1.4ಕಿ.ಮೀ ಅಕ್ವಾಡೆಕ್ಟ್ (ಜಲಸೇತುವೆ) ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು 15 ಲಕ್ಷ ಎಕರೆ ಭೂಮಿ ನೀರಾವರಿಯಿಂದ, ಜಿಲ್ಲೆಯ 203 ಕೆರೆಗಳು ತುಂಬುವದರಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ. ತನ್ಮೂಲಕ ಜಿಲ್ಲೆಯ ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಏರಿಕೆ ಕಂಡು ಬಂದು ರಾಷ್ಟ್ರದಲ್ಲಿಯೇ ಪ್ರಥಮ 10 ಶ್ರೀಮಂತ ಜಿಲ್ಲೆಗಳಲ್ಲಿ ವಿಜಯಪುರಕ್ಕೆ ಸ್ಥಾನ ಲಭಿಸಲಿದೆ. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯ ಯೋಜನೆ ರೂಪಿಸಿದ್ದು, ಎಲ್ಲ ನನ್ನ ಅಧಿಕಾರಿಗಳು ಕೂಡ ನನ್ನ ಕನಸಿನ ಯೋಜನೆಗಳನ್ನು ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಚುನಾವಣೆಯ ವರ್ಷ, ನೀರಾವರಿ ಯೋಜನೆಗಳ ಕೆಲಸ ನಿಮಿತ್ಯ ಇನ್ನೂ 7-8 ತಿಂಗಳು ನನಗೆ ಕ್ಷೇತ್ರದಲ್ಲಿ ನನಗೆ ಸಮಯ ಕೊಡಲು ಆಗುವುದಿಲ್ಲ. ನಾನು ಮಾಡಿರುವ ಕೆಲಸಗಳನ್ನು ಮೆಚ್ಚಿ ನೀವು ಖಂಡಿತವಾಗಿ ಆಶೀರ್ವದಿಸುತ್ತೀರಿ, ಮುಂದೆಯೂ ನಮ್ಮ ಸರ್ಕಾರವೇ ರಚನೆಯಾಗಲಿದ್ದು, ಮತ್ತೊಮ್ಮೆ ನೀರಾವರಿ ಮಂತ್ರಿಯೇ ಆಗಿ ರಾಜ್ಯದಲ್ಲಿ ಉಳಿದ ಯೋಜನೆಗಳನ್ನು ಸಹ ಪೂರ್ಣಗೊಳಿಸುತ್ತೇನೆ ಎಂದರು.
ಅಧೀಕ್ಷಕ ಅಭಿಯಂತರ ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಜಿ.ಪಂ.ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಮಾಜಿ ಉಪಾಧ್ಯಕ್ಷ ವಿ.ಎನ್.ಬಿರಾದಾರ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಬಸವರಾಜ ಬಿರಾದಾರ, ದೇವಾನಂದ ಅಲಗೊಂಡ, ಶ್ರೀಶೈಲಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ರಾಮಲಿಂಗ ಕೊಕಟನೂರ, ಬಾಪುಗೌಡ ಹಲಗಣಿ, ಹರೀಶ ಕುಲಕರ್ಣಿ, ಎ.ಪಿ.ಎಂ.ಸಿ ನಿರ್ದೇಶಕರಾದ ಹನಮಂತ ಲೋಕುರಿ, ಮಹೇಶ ಮಾಳಿ ಮುಂತಾದವರು ಉಪಸ್ಥಿತರಿದ್ದರು.

loading...

ಶಂಕರ ರಾಠೋಡ ಸ್ವಾಗತಿಸಿದರು. ಪಿ.ಕೆ.ಶಂಕರ ವಂದಿಸಿದರು.

loading...