ರೈತರ ಮೇಲೆ ಗೋಲಿಬಾರ್‍ಗೆ ನಡೆಸಿದ್ದ ಖಂಡಿಸಿ ಪ್ರತಿಭಡನೆ

0
29

ಕನ್ನಡಮ್ಮ ಸುದ್ದಿ-ವಿಜಯಪುರ, ಜೂನ್ 09
ಮಧ್ಯಪ್ರದೇಶದಲ್ಲಿನ ರೈತರ ಮೇಲೆ ಗೋಲಿಬಾರ್‍ಗೆ ನಡೆಸಿದ್ದ ಉಗ್ರ ಶಿಕ್ಷೆ ನೀಡಬೇಕು ಎಂದು ರೈತ-ಕೃಷಿಕಾರ್ಮಿಕ ಸಂಘಟನೆಯಿಂದ ಗುರುವಾರ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ, ಕಾರ್ಮಿಕ ಮುಖಂಡ ಭಿ. ಭಗವಾನರೆಡ್ಡಿ, ಮಧ್ಯಪ್ರದೇಶದಲ್ಲಿನ ರೈತರು ಬೆಂಬಲ ಬೆಲೆ ಹಾಗೂ ಸಾಲಮನ್ನಾಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಚಳುವಳಿಯ ಮೇಲೆ ಅಲ್ಲಿನ ಆಡಳಿತಾರೂಢ ಸರ್ಕಾರವು ಪೊಲೀಸ್ ಬಲ ಪ್ರಯೋಗಿಸಿ ಗೋಲಿಬಾರ್ ನಡೆಸಿ ರೈತರ ಸಾವಿಗೆ ಕಾರಣವಾಗಿರುವುದು ಮಾತ್ರ ಅಮಾನವೀಯ ಸಂಗತಿ ಎಂದರು.
ಮಧ್ಯಪ್ರದೇಶದ ಮಂಡಸೌರನಲ್ಲಿ ನಡೆದ ಈ ಘಟನೆಯು ಈಗ 6 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ತೀವ್ರವಾದ ಬರಗಾಲದಿಂದ ನರಳಿ ತಾವು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆಯನ್ನು ನೀಡಲು ಆಗ್ರಹಿಸಿ ನಡೆಸಿದ ರೈತರ ಚಳುವಳಿಯನ್ನು ಸರ್ಕಾರವು ನಿರ್ದಯವಾಗಿ ತುಳಿದಿರುವುದ ಖಂಡಿಸುತ್ತೇವು ಎಂದರು.
ಸಂಘಟನೆ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಆಳುವ ಸರ್ಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಕೈಗಾರಿಕೆ ಕ್ಷೇತ್ರೆಗಳಲ್ಲಿ ಪ್ರತಿವರ್ಷ ಲಕ್ಷಕೋಟಿಗಟ್ಟಲೇ ಸಾಲ ಮನ್ನಾ ಮಾಡುತ್ತಿರುವ ಸರ್ಕಾರಗಳು ರೈತರು ಸಂಕಷ್ಟದಲ್ಲಿರುವ ಸಾಲಮನ್ನಾ ಮಾಡಲು ಹಿಂಜರಿಯುತ್ತಿದೆ ಎಂದರು.
ಈ ಕೂಡಲೇ ಮಧ್ಯಪ್ರದೇಶ ಸರ್ಕಾರ ಮೃತ ರೈತ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು. ಅಲ್ಲದೆ ಗೋಲಿಬಾರ್‍ನಲ್ಲಿ ಗಾಯಗೊಂಡ ರೈತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರ ನೀಡಬೇಕು, ಹಾಗೂ ರೈತರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ತಿಪರಾಯ ಹತ್ತರಕಿ, ಶ್ರೀಶೈಲ ನಿಮಂಗ್ರೆ, ಕಾಶೀಬಾಯಿ ರಾಠೋಡ ಮೊದಲಾದವರು ಪಾಲ್ಗೊಂಡಿದ್ದರು.

loading...