ರೈತರ ಸಾಲಮನ್ನಾ ಚಿಕ್ಕೋಡಿಯಲ್ಲಿ ವಿಜಯೋತ್ಸವ

0
54
loading...

ರೈತರ ಸಾಲಮನ್ನಾ ಚಿಕ್ಕೋಡಿಯಲ್ಲಿ ವಿಜಯೋತ್ಸವ

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 21: ರಾಜ್ಯ ಸರಕಾರ ಸಹಕಾರಿ ಸಂಘ ಸಂಸ್ಥೆಗಳಲ್ಲಿ ರೈತರು ಪಡೆದ 50 ಸಾವಿರ ಬೆಳೆಸಾಲ ಮನ್ನಾ ಮಾಡಿದ್ದಕ್ಕಾಗಿ ಚಿಕ್ಕೋಡಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಮುದಸರ್ ಜಮಾದಾರ ಮಾತನಾಡಿ, ರಾಜ್ಯದ ರೈತರು ಸಂಕಷ್ಟದಲ್ಲಿರುವನ್ನು ಮನಗಂಡು ಸಿದ್ದರಾಮಯ್ಯ ಸರಕಾರ ರೈತರ ಸಾಲಮನ್ನಾ ಮಾಡಿದ್ದು, ಕೇಂದ್ರ ಸರಕಾರವು ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಸಾಬೀರ್ ಜಮಾದಾರ ಮಾತನಾಡಿ, ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದಿರುವ ಘಟನೆಗಳು ನಡೆದರೂ ಕೇಂದ್ರ ಸರಕಾರ ಸಾಲಮನ್ನಾ ಬಗ್ಗೆ ಯೋಚನೆ ಮಾಡಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲಮನ್ನಾ ಮೂಲಕ ಕೃಷಿಕರ ರಕ್ಷಣೆಗೆ ಮುಂದಾಗಿದ್ದಾರೆ. ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಸಾಲಮನ್ನಾ ಮಾಡಲು ಸರಕಾರದ ಮೇಲೆ ಒತ್ತಡ ಹಾಕಿದ್ದರು ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ಗುಲಾಬ್ ಜಮಾದಾರ ಮಾತನಾಡಿ, ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.
ರವಿ ಮಾಳಿ, ಬಾಬು ಸಮ್ಮತಶೆಟ್ಟಿ, ಶ್ರೀಕಾಂತ ಇಂಗಳೆ, ಸುಧೀರ ಮಾಯಪ್ಪಗೋಳ, ಇಪರ್ಾನ್ ನಾಯಿಕವಾಡಿ, ರಂಜಾನ್ ಕಪ್ರೇಲ್, ಸುರೇಶ ಕಾಮಕರ, ಮದಾರ ಶೇಖ, ಅಮೂಲ ಹಿರೇಮನಿ, ಆಸೀಪ್ ಮುಲ್ಲಾ, ಹಣಮಂತ ವಡ್ಡರ, ಸಂತೋಷ ವಡ್ಡರ, ಮುತ್ತೆಪ್ಪ, ಗಣೇಶ ಪಾತ್ರೋಟೆ, ವಿಜಯ ಕೇರಿಮನಿ ಉಪಸ್ಥಿತರಿದ್ದರು.

loading...