ವಿಂಡೀಸ್ ತಂಡ ಪ್ರಕಟ

0
25
loading...

ಪೋರ್ಟ್ ಆಫ್ ಸ್ಪೈನ್: ಮುಂಬರುವ ಭಾರತ ತಂಡದ ವಿಂಡೀಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಹಿಂದೆ ಆಫ್ಘಾನಿಸ್ತಾದ ವಿರುದ್ಧ ಆಡಿದ್ದ ಅದೇ ತಂಡವನ್ನು ಭಾರತದ ವಿರುದ್ಧದ ಟೂರ್ನಿಗೂ ಉಳಿಸಿಕೊಳ್ಳಲಾಗಿದೆ.
ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ವಿರುದ್ಧದ ಸರಣಿ ಅತೀ ಮುಖ್ಯವಾಗಿದ್ದು, ಅರ್ಹತಾ ಸುತ್ತಿಲ್ಲದೇ ಐಸಿಸಿ ಟೂರ್ನಮೆಂಟ್ ಗಳಲ್ಲಿ ಸ್ಥಾನ ಪಡೆಯಲು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಭಾರತ ತಂಡ ಪ್ರಸ್ತುತ 3ನೇ ಸ್ಥಾನದಲ್ಲಿದ್ದು, 116 ಅಂಕಗಳನ್ನು ಗಳಿಸಿದೆ. ವೆಸ್ಟ್ ಇಂಡೀಸ್ ತಂಡ ಕೇವಲ 77 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಭಾರತದ ವಿರುದ್ಧ ಸರಣಿ ಗೆದ್ದರೆ ವಿಂಡೀಸ್ ಅಂಕಗಳಲ್ಲಿ ಏರಿಕೆಯಾಗಲಿದ್ದು, ರ್ಯಾಂಕಿಂಗ್ ನಲ್ಲಿಯೂ ಬದಲಾವಣೆ ನೋಡಬಹುದಾಗಿದೆ. 2019ರ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯಲು ವಿಂಡೀಸ್ ತಂಡ ಟಾಪ್ 8 ಸ್ಥಾನಗಳೊಳಗೆ ಸ್ಥಾನ ಪಡೆಯಬೇಕಿದೆ. ಹೀಗಾಗಿ ಜೇಸನ್ ಹೋಲ್ಡರ್ ಪಡೆಗೆ ಭಾರತದ ವಿರುದ್ಧ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಇದೇ ಜೂನ್ 23ರಿಂದ 5 ಪಂದ್ಯಗಳ ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಆರಂಭವಾಗಲಿದೆ.
ವಿಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೂ, ಜೋನಾಥನ್ ಕಾರ್ಟರ್, ರೋಸ್ಚನ್ ಚೇಸ್, ಮಿಗ್ಯುಯೆಲ್ ಕ್ಯುಮಿನ್ಸ್, ಶಾಯ್ ಹೋಪ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಎವಿನ್ ಲೂಯಿಸ್, ಜೇಸನ್ ಮಹಮದ್, ಆಯಶ್ಲೆ ನರ್ಸ್, ಕೀರನ್ ಪಾವೆಲ್, ರಾವ್ಮನ್ ಪಾವೆಲ್, ಕೆಸ್ರಿಕ್ ವಿಲಿಯಮ್ಸ್.

loading...